ಸೂರ್ಯಗ್ರಹಣ: ಡಿವೈಎಫ್‌ಐನಿಂದ ಫಲಾಹಾರ ಸೇವಿಸುವ ಕಾರ್ಯಕ್ರಮ

ಮಂಗಳೂರು, ಡಿ.26: ಸೂರ್ಯಗ್ರಹಣದ ಪ್ರಯುಕ್ತ ಡಿವೈಎಫ್‌ಐ ಉರ್ವಸ್ಟೋರ್ಸ್ ಘಟಕದ ವತಿಯಿಂದ ಸೂರ್ಯಗ್ರಹಣ ವೀಕ್ಷಣೆ ಮತ್ತು ಫಲಾಹಾರ ಸೇವಿಸುವ ಕಾರ್ಯಕ್ರಮ ಉರ್ವಸ್ಟೋರ್ಸ್ ಸುಂಕದಕಟ್ಟೆ ಪ್ರದೇಶದಲ್ಲಿ ನಡೆಯಿತು.
ಕಾರ್ಯಕ್ರಮದ ಮೂಲಕ ಪ್ರದೇಶದ ಜನರಿಗೆ ಸೂರ್ಯಗ್ರಹಣ ನಡೆಯುವ ವೈಜ್ಞಾನಿಕ ಕಾರಣಗಳ ಬಗ್ಗೆ ತಿಳಿ ಹೇಳಲಾಯಿತು. ಇದರ ಬಗ್ಗೆ ಜನರಿಗೆ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ನಡೆಯಿತು.

Next Story





