ಪಂಜಿಕಲ್ಲು: ಮಾಜಿ ಸಚಿವ ರೈಗೆ ಕೃತಜ್ಞತೆ ಸಲ್ಲಿಸಿ ಹಾಕಿದ್ದ ಬ್ಯಾನರ್‌ಗೆ ಹಾನಿ

ಬಂಟ್ವಾಳ : ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಅಣ್ಣಳಿಕೆ-ಕರಿಮಲೆ ಗ್ರಾಮಸ್ಥರು ಅಣ್ಣಳಿಕೆ ದ್ವಾರದ ಬಳಿ ಹಾಕಲಾಗಿದ್ದ ಬ್ಯಾನರ್‌ನ್ನು ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಅಭಿವೃದ್ಧಿ ಯೋಜನೆಯಲ್ಲಿ ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅಣ್ಣಳಿಕೆ -ಕರಿಮಲೆ ರಸ್ತೆ ಹಾಗೂ ತಡೆಗೋಡೆ 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಅಭಿನಂದನೆ" ಸಲ್ಲಿಸಿ ಅಣ್ಣಳಿಕೆ ಗ್ರಾಮಸ್ಥರು ಅಣ್ಣಳಿಕೆ ದ್ವಾರದ ಬಳಿ ಬುಧವಾರ ಬ್ಯಾನರ್‌ವೊಂದನ್ನು ಅಳವಡಿಸಿದ್ದರು. ಅದನ್ನು ಕಿಡಿಗೇಡಿಗಳು ಸಂಪೂರ್ಣ ಹರಿದು ಭಗ್ನಗೊಳಿಸಿದ್ದಾರೆ.
ಕಿಡಿಗೇಡಿಗಳ ವಿರುದ್ಧ ಪೊಲೀಸ್ ದೂರು?
"ಈ ಭಾಗದಲ್ಲಿ ಇನ್ನೊಂದು ಪಕ್ಷದವರು ಎಷ್ಟೋ ಬ್ಯಾನರ್‌ಗಳಿವೆ. ಆದರೂ, ಕಾಂಗ್ರೆಸ್ ಕಾರ್ಯಕರ್ತರು ಏನೂ ಮಾಡಿಲ್ಲ. ಆದರೆ, ಅಭಿನಂದನೆ ಸಲ್ಲಿಸಿ ಅಳವಡಿಸಲಾಗಿದ್ದ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದು, ಇದು ಅವರ ಕೆಟ್ಟ ಸಂಸ್ಕೃತಿಯನ್ನು ಸೂಚಿಸುತ್ತದೆ. ಕೃತ್ಯ ಎಸಗಿರುವವರು ಯಾರು ಎಂಬುದನ್ನು ದೇವರು ತೋರಿಸಿ ಕೊಡಲಿ. ಇದೇ ಸ್ಥಳದಲ್ಲಿ ಮತ್ತೊಂದು ಬ್ಯಾನರ್ ಅಳವಡಿಸುವುದರ ಜೊತೆಗೆ ಕಿಡಿಗೇಡಿಗಳ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು "ವಾರ್ತಾಭಾರತಿ"ಗೆ ತಿಳಿಸಿದ್ದಾರೆ.







