ತಮಿಳು ನಾಡು:ಮುಂದುವರಿದ ಸಿಎಎ ವಿರುದ್ಧ ಪ್ರತಿಭಟನೆ

file photo
ಚೆನ್ನೈ,ಡಿ.26: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಗುರುವಾರವೂ ಇಲ್ಲಿ ಮುಂದುವರಿದಿದ್ದು,ಸಾಹಿತಿಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತರ ಗುಂಪೊಂದು ಮತಪ್ರದರ್ಶನ ನಡೆಸಿತು. ಇವರೊಂದಿಗೆ ಹಲವಾರು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಕೈಜೋಡಿಸಿದ್ದವು.
ಹಿರಿಯ ಸಿಪಿಐ ನಾಯಕ ಆರ್.ನೆಲ್ಲಕನ್ನು,ವಿಸಿಕೆ ಸ್ಥಾಪಕ ಹಾಗೂ ಸಂಸದ ಥೋಲ್ ತಿರುಮಾವಲವನ್,ಡಿಎಂಕೆ ಸಂಸದೆ ಕನಿಮೋಳಿ,ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ.ಬಾಲಕೃಷ್ಣನ್,ಐಯುಎಂಎಲ್ನ ರಾಜ್ಯ ನಾಯಕರು ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸಿಎಎ ಅನ್ನು ಬೆಂಬಲಿಸುತ್ತಿರುವುದಕ್ಕಾಗಿ ರಾಜ್ಯದ ಆಡಳಿತಾರೂಢ ಎಐಎಡಿಎಂಕೆ ಪಕ್ಷವನ್ನು ಪ್ರತಿಭಟನಾಕಾರರು ತರಾಟೆಗೆತ್ತಿಕೊಂಡರು.
Next Story





