ಕಾರ್ಕಳ, ಡಿ.26: ಮನೆಯ ತೆಂಗಿನ ಮರದಿಂದ ಬಿದ್ದು, ತೀವ್ರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತಾಲೂಕಿನ ದುರ್ಗಾ ಗ್ರಾಮದ ಮಂಜೊಲ್ತಾರ್ ಹೌಸ್ನ ಶ್ರೀನಿವಾಸ ಮೊಯ್ಲಿ (68) ಇವರು ಬುಧವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.