ಬಂಟ್ವಾಳ: ಪಿಎಫ್ಐ, ಸಿಎಫ್ಐ, ಎಸ್ಡಿಪಿಐ ಮುಖಂಡರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ, ಡಿ. 26: ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಆರೋಪದ ಮೇರೆಗೆ ಪಿಎಫ್ಐ, ಸಿಎಫ್ಐ, ಎಸ್ಡಿಪಿಐ ಸಂಘಟನೆಗಳ ಮುಖಂಡರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ರಾತ್ರಿ 7ಗಂಟೆಗೆ ಸುಮಾರಿಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೈಕಂಬ ಎಂಬಲ್ಲಿ ಪಿಎಫ್ಐ, ಸಿಎಫ್ಐ, ಎಸ್ಡಿಡಿಪಿಐ ಸಂಘಟನೆಗಳು ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿರುವುದಾಗಿ, ಈ ವೇಳೆ ಪೊಲೀಸರು ಕಾನೂನು ಉಲ್ಲಂಘನೆ, ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿ ಕೂಟವನ್ನು ಚದುರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಘಟನೆಗಳ ಮುಖಂಡರಾದ ಫಾಹದ್, ಇಸಾಕ್ ಶಾಂತಿ ಅಂಗಡಿ, ನೌಶೀರ್, ಅಶ್ರಫ್ ಸೇರಿದಂತೆ ಸುಮಾರು 30 ಮಂದಿ ಯಾವುದೇ ಅನುಮತಿ ಪಡೆಯದೇ ಧ್ವನಿವರ್ಧಕವನ್ನು ಬಳಸಿಕೊಂಡು ಅಕ್ರಮ ಕೂಟ ಸೇರಿ ಪ್ರತಿಭಟನೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story