ಟರ್ಕಿಯ ವ್ಯಾನ್ ಸರೋವರದಲ್ಲಿ ದೋಣಿ ಮುಳುಗಿ 7 ವಲಸಿಗರು ಮೃತ

ಸಾಂದರ್ಭಿಕ ಚಿತ್ರ
ಇಸ್ತಾಂಬುಲ್, ಡಿ. 26: ಪೂರ್ವ ಟರ್ಕಿಯ ಲೇಕ್ ವ್ಯಾನ್ನಲ್ಲಿ ಗುರುವಾರ ನಿರಾಶ್ರಿತರನ್ನು ಒಯ್ಯುತ್ತಿದ್ದ ದೋಣಿಯೊಂದು ಮುಳುಗಿದಾಗ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ 64 ಮಂದಿಯನ್ನು ರಕ್ಷಿಸಲಾಗಿದೆ ಎಂದು ಟರ್ಕಿಯ ಬಿಟ್ಲಿಸ್ ಪ್ರಾಂತದ ಗವರ್ನರ್ ಕಚೇರಿ ತಿಳಿಸಿದೆ.
ದೋಣಿಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಿರಾಶ್ರಿತರನ್ನು ಬಿಟ್ಲಿಸ್ನ ಅದಿಲ್ಸೆವಝ್ಗೆ ಒಯ್ಯುತ್ತಿತ್ತು. ಅದಿಲ್ಸೆವಝ್ ಸಮೀಪಿಸುತ್ತಿದ್ದಾಗ ಮುಂಜಾನೆ 3 ಗಂಟೆ ಸುಮಾರಿಗೆ ದೋಣಿ ಮುಳುಗಿತು.
ಈ ಸರೋವರವು ಇರಾನ್ ಗಡಿಯ ಸಮೀಪದಲ್ಲಿದೆ. ಅಲ್ಲಿಂದ ನಿರಾಶ್ರಿತರು ನಿಯಮಿತವಾಗಿ ಟರ್ಕಿ ಗಡಿ ದಾಟಿ ಬರುತ್ತಾರೆ. ಅಲ್ಲಿಂದ ಪಶ್ಚಿಮಾಭಿಮುಖವಾಗಿ ಅವರು ಯುರೋಪ್ಗೆ ಹೋಗುತ್ತಾರೆ.
ಐವರು ಸ್ಥಳದಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು.
Next Story





