ತೆಕ್ಕಾರು: ಮಂಗಳೂರು ಗೋಲಿಬಾರ್ ಖಂಡಿಸಿ ಕರಪತ್ರ ಪ್ರದರ್ಶನ

ಮಂಗಳೂರು, ಡಿ.27: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣ ಖಂಡಿಸಿ ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು ಇದರ ವತಿಯಿಂದ ಪ್ರತಿರೋಧ ಮತ್ತು ಕರಪತ್ರ ಪ್ರದರ್ಶನ ಇಂದು ಜುಮಾ ಬಳಿಕ ತೆಕ್ಕಾರು ಮಸ್ಜಿದ್ ವಠಾರದಲ್ಲಿ ನಡೆಯಿತು.
ಜಮಾಅತ್ ಆಡಳಿತ ಸಮಿತಿ ಸದಸ್ಯ ಉಸ್ಮಾನ್ ಸಹದಿ ತೆಕ್ಕಾರು ಖಂಡನಾ ಭಾಷಣ ಮಾಡಿದರು. ಸ್ಥಳೀಯ ಖತೀಬ್ ಅಬ್ದುಲ್ ರವೂಫ್ ಅಹ್ಸನಿ ಕಾಸರಗೋಡು ಪೋಲೀಸ್ ಗೋಲಿಬಾರ್ ಘಟನೆಯನ್ನು ಖಂಡಿಸಿ ಮಾತನಾಡಿದರು.
BJM ತೆಕ್ಕಾರು ಪ್ರಧಾನ ಕಾರ್ಯದರ್ಶಿ ಅತಾವುಲ್ಲಾ T.H ಸ್ವಾಗತಿಸಿ ವಂದಿಸಿದರು. K.P ಬಾತಿಶ್ ತೆಕ್ಕಾರು ನಿರೂಪಿಸಿದರು.

Next Story





