ವಿದ್ಯುತ್ ಅಪಾಯದ ಕುರಿತು ಜನಜಾಗೃತಿ

ಕಾಪು, ಡಿ.27: ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಉಡುಪಿ ವೃತ್ತ ಇದರ ವತಿಯಿಂದ ವಿದ್ಯುತ್ ಅಪಾಯದ ಕುರಿತು ಜನಜಾಗೃತಿ ಮತ್ತು ವಿದ್ಯುತ್ ಉಳಿತಾಯದ ಕುರಿತ ವಿಡಿಯೋ ಚಿತ್ರ ಪ್ರದಶನವನ್ನು ಇತ್ತೀಚೆಗೆ ಪೊಲಿಪು ಸರಕಾರಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ಚಾಲನೆ ನೀಡಿದರು. ಮೆಸ್ಕಾಂ ಉಡುಪಿ ಜಿಲ್ಲಾ ಅಧೀಕ್ಷಕ ನರಸಿಂಹ ಪಂಡಿತ್, ಅಧಿಕಾರಿಗಳಾದ ಮಾರ್ತಾಂಡಪ್ಪ ಮಣಿಪಾಲ್, ಪ್ರಾಣೇಶ, ಮೃತುಂಜಯ, ಸಿದ್ದೇಶ, ಸಹಾಯಕ ಎಜಿನಿಯರ್ ಹರೀಶ ಕುಮಾರ್ ಕಾಪು, ಸೆಕ್ಷನ್ ಆಫೀಸರ್‌ಗಳಾದ ಅವಿನಾಶ್ ಕಾಪು, ರಾಜೇಶ್ ಕಟಪಾಡಿ, ಮಲ್ಲಿಕಾರ್ಜುನ್ ಶಿರ್ವ, ರವೀಂದ್ರ ನಾಯಕ ಮೊದಲಾದವರು ಉಪಸ್ಥಿತರಿದ್ದರು.
Next Story





