ಭಾರತ ಅಸುರಕ್ಷಿತ ದೇಶವೆಂದು ಐಸಿಸಿ ಘೋಷಿಸಬೇಕು: ಮಿಯಾಂದಾದ್
ಕರಾಚಿ, ಡಿ.27: ವಿದೇಶಿ ತಂಡಗಳು ಕ್ರಿಕೆಟ್ ಪ್ರವಾಸ ಕೈಗೊಳ್ಳಲು ಭಾರತ ಅಸುರಕ್ಷಿತ ದೇಶವಾಗಿದೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಘೋಷಿಸಬೇಕು ಎಂದು ಪಾಕ್‌ನ ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ಆಗ್ರಹಿಸಿದ್ದಾರೆ.
ಭಾರತ ಸುರಕ್ಷಿತ ದೇಶವಾಗಿರದ ಕಾರಣ ಇಡೀ ವಿಶ್ವಕ್ಕೆ, ತನ್ನೇಲ್ಲಾ ಸದಸ್ಯರುಗಳಿಗೆ ಭಾರತದಲ್ಲಿ ಕ್ರಿಕೆಟ್ ಪಂದ್ಯ ಆಡುವುದನ್ನು ನಿಲ್ಲಿಸಬೇಕೆಂದು ಐಸಿಸಿ ಕರೆ ನೀಡಬೇಕು. ಭಾರತ ತನ್ನ ಪ್ರಜೆಗಳೊಂದಿಗೆ ಜಗಳವಾಡುತ್ತಿದೆ. ಅಲ್ಲಿ ಏನು ಆಗುತ್ತಿದೆ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಲಿ ಎಂದು ಮಿಯಾಂದಾದ್ ಒತ್ತಾಯಿಸಿದರು. ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವುದನ್ನು ಬೆಟ್ಟು ಮಾಡಿ ಮಿಯಾಂದಾದ್ ಈ ಹೇಳಿಕೆ ನೀಡಿದ್ದಾರೆ.
Next Story





