ಜ. 3: ಸಂತ ಆ್ಯಗ್ನೆಸ್ ಕಾಲೇಜು ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ

ಮಂಗಳೂರು, ಡಿ. 28: ಮದರ್ ಮೇರಿ ಅಲೋಶಿಯಾ ಅವರಿಂದ 1920-21ರಲ್ಲಿ ಸ್ತಾಪನೆಯಾದ ಭಾರತದ ಪಶ್ಚಿಮ ಕರಾಳಿಯ ಮೊತ್ತ ಮೊದಲ ಮಹಿಳಾ ಕಾಲೇಜ್ ಸಂತ ಆ್ಯಗ್ನೆಸ್ ಕಾಲೇಜಿನ ಶತಮಾನೋತ್ಸವ ಸಮಾರಂಭ ಜ.3ರಂದು ಬೆಳಗ್ಗೆ 9.30ಕ್ಕೆ ಮದರ್ ಮೇರಿ ಅಲೋಶಿಯಸ್ ಸ್ಮರಣಾರ್ಥ ನೂತನ ಕಟ್ಟಡ ಉದ್ಘಾಟನೆಯೊಂದಿಗೆ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.
ಅಂದು ಸಂಜೆ 5 ಗಂಟೆಗೆ ಶತಮಾನೋತ್ಸವದ ವರ್ಷಾಚರಣೆಯ ಉದ್ಘಾಟನಾ ಕಾರ್ಯಕ್ರಮ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಸಂತ ಆ್ಯಗ್ನೆಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆಸ್ವಿನ್ ಎ.ಸಿ.ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಬೆಳಗ್ಗಿನ ಕಟ್ಟಡವನ್ನು ಸುಪೀರಿಯರ್ ಜನರಲ್ ಸಿಸ್ಟರ್ ಎಂ.ಸುಶೀಲಾ ಎಸಿ ಉದ್ಘಾಟಿಸಲಿದ್ದಾರೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಅತೀ. ವಂ. ಡಾ. ಪಿಟರ್ ಪೌಲ್ ಸಲ್ದಾನಾ ಆಶೀರ್ವಚನ ನೀಡಲಿದ್ದಾರೆ. ಸಂಜೆ 5 ಗಂಟೆಗೆ ನಡೆಯಲಿರುವ ಪದವಿ ಕಾಲೇಜಿನ ತೆರೆದ ಸಭಾಂಗಣದಲ್ಲಿ ನಡೆಯಲಿರುವ ಶತಮನೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ರೆವೆರೆಂಡ್ ಸುಶೀಲಾ ಎ.ಸಿ,ಪ್ರವಿನ್ಸಿಯಲ್ ಸುಪೀರಿಯರ್ ಸಿಸ್ಟರ್ ಎಂ.ಶಮಿತ ಎ.ಸಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಲಿ ಯುಎಸ್‌ಎಯ ರೇಂಬಸ್ ಸಂಸ್ಥೆಯ ನಿರ್ದೇಶಕಿ ಮೀರಾರಾವ್ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯ,ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಅನಿರುದ್ಧ ಶ್ರವಣ್ ಭಾಗವಹಿಸಲಿದ್ದಾರೆ.
ಶತಮಾನೋತ್ಸವದ 100 ಕಾರ್ಯಕ್ರಮಗಳು: ಡಿಸೆಂಬರ್ 15ರಂದು ಆಗ್ನೆಷಿಯನ್ ಸೆಂಟಿನರಿ ರನ್ ಎಂಬ ಕಾರ್ಯಕ್ರಮ ದೊಂದಿಗೆ 100 ಇತರ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.ನೋಲೆಜ್ ಪ್ಯಾಕ್ಟರಿ ಕಾರ್ಯಕ್ರಮದ ಮೂಲಕ ವಿವಿಧ ಕ್ಷೇತ್ರಗಳ ಗಣ್ಯರ ಉಪನ್ಯಾಸದೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಉದ್ಯಮಿಗಳ ವ್ಯಾಪಾರ ಮೇಳ, ಕಾಲೇಜಿನ ಸಮಾಜ ಸೇವಾ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ. ಮಹಿಳಾ ವಿಶ್ವ ವಿದ್ಯಾನಿಲಯಗಳ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕ್ರೀಡಾ ಕೂಟ, ಆಗ್ನೋತ್ಸವ ಕಾರ್ಯಕ್ರಮದಲ್ಲಿ 100 ಮಹಿಳಾ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಡಾ. ಜೆಸ್ವಿನಾ ತಿಳಿಸಿದ್ದಾರೆ.
ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಅತಿಥಿಗಳಾಗಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್,ಪೊಲೀಸ್ ಆಯುಕ್ತಯ ಡಾ.ಪಿ.ಎಸ್. ಹರ್ಷ, ಉದ್ಯಮಿ ಮೈಕಲ್ ಡಿಸೋಜ, ವಿಶ್ವ ಬ್ಯಾಂಕ್‌ನ ಮಾಜಿ ಹಿರಿಯ ಸಲಹೆಗಾರ ಡಾ. ಬ್ರಾಯನ್ ಪಿಂಟೋ, ಉದ್ಯಮಿ ಶಬಾನಾ ಫೈಝಲ್, ಲೆಸ್ಲಿ ಜೆ.ಫೆರ್ನಾಂಡೀಸ್, ರೊನಾಲ್ಡ್ ಪಿಂಟೋ ಮೊದಲಾದವರು ಭಾಗವಹಿಸಲಿದ್ದಾರೆ.







