ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಗೆ 'ಎಡಿಟರ್ಸ್ ಗಿಲ್ಡ್' ತರಾಟೆ
ರಾಜದೀಪ್ ಸರ್ದೇಸಾಯಿ ಕುರಿತು ಅವಹೇಳನಕಾರಿ ಟ್ವಿಟರ್ ಪೋಲ್

ಹೊಸದಿಲ್ಲಿ: ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರ ಕುರಿತಂತೆ ಸೋಶಿಯಲ್ ಮೀಡಿಯಾ ಪೋಲ್ ನಡೆಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಅವರನ್ನು 'ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ' ಖಂಡಿಸಿದೆ.
"ರಾಜದೀಪ್ ಸರ್ದೇಸಾಯಿ ಅವರು ಐಸಿಸ್ ಪಿಆರ್ ಹ್ಯಾಂಡಲ್ ನಡೆಸಬೇಕೇ,'' ಎಂದು ಮಾಳವಿಯ ಡಿಸೆಂಬರ್ 27ರಂದು ಟ್ವಿಟರ್ ಪೋಲ್ ನಡೆಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಡಿಟರ್ಸ್ ಗಿಲ್ಡ್ ಇದನ್ನೊಂದು `ಖಂಡನೀಯ ಕೃತ್ಯ' ಎಂದು ಬಣ್ಣಿಸಿದೆ. "ಗೌರವಾನ್ವಿತ ಪತ್ರಕರ್ತರಾಗಿರುವ ಹಾಗೂ ಎಡಿಟರ್ಸ್ ಗಿಲ್ಡ್ ನ ಮಾಜಿ ಅಧ್ಯಕ್ಷರಾಗಿರುವ ಸರ್ದೇಸಾಯಿ ಅವರ ಪ್ರಾಮಾಣಿಕತೆಯನ್ನೂ ಪ್ರಶ್ನಿಸಿರುವ ಈ ಕೃತ್ಯ ಆಕ್ಷೇಪಾರ್ಹ" ಎಂದು ಸಂಘಟನೆ ಹೇಳಿದೆ.
ವಾಕ್ ಸ್ವಾತಂತ್ರ್ಯಕ್ಕೆ ಬಿಜೆಪಿಗಿರುವ ಬದ್ಧತೆಯನ್ನು ಈ ಕೃತ್ಯ ಪ್ರಶ್ನಿಸುವಂತೆ ಮಾಡುತ್ತದೆ ಎಂದು ಹೇಳಿದ ಗಿಲ್ಡ್, ಈ ಕೃತ್ಯಕ್ಕೆ ಮಾಳವಿಯ ಅವರನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಬಿಜೆಪಿಗೆ ಹೇಳಿದೆಯಲ್ಲದೆ, ಕೂಡಲೇ ಈ ಟ್ವಿಟರ್ ಪೋಲ್ ವಾಪಸ್ ಪಡೆಯುವಂತೆ ಸೂಚಿಸಿದೆ.
Next Story





