ಕೊಡಗು ಕಾಂಗ್ರೆಸ್‍ನಿಂದ 135ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಮಡಿಕೇರಿ ಡಿ.28 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ 135ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಕಾಂಗ್ರೆಸ್ ಪಕ್ಷ ಸಮಾನತೆಯ ಆಧಾರದಲ್ಲಿ ಈ ದೇಶದ ಜನರನ್ನು ಒಗ್ಗೂಡಿಸಿದರೆ ಭಾರತೀಯ ಜನತಾ ಪಕ್ಷವು ಅದಕ್ಕೆ ತದ್ವಿರುದ್ಧವಾಗಿ ಧರ್ಮದ ಆಧಾರದಲ್ಲಿ ದೇಶದ ಜನರನ್ನು ಒಡೆಯುತ್ತಿರುವುದು ದುರದೃಷ್ಟಕರ ಎಂದರು.
ಕೆಪಿಸಿಸಿ ಹಿರಿಯ ಮುಖಂಡ ಟಿ.ಪಿ.ರಮೇಶ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಥಮ ಅಧ್ಯಕ್ಷರಾದ ಡಬ್ಲ್ಯು ಸಿ. ಬ್ಯಾನರ್ಜಿ ಅವರಿಂದ ಇಂದಿನ ಅಧ್ಯಕ್ಷರಾದ ಸೋನಿಯಗಾಂಧಿ ವರೆಗೆ ಕಾಂಗ್ರೆಸ್ ಅಧ್ಯಕ್ಷರುಗಳು ದೇಶಕ್ಕೆ ನೀಡಿದ ಕೊಡುಗೆ ಅಪಾರವೆಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೇಕಲ್ ರಮಾನಾಥ್ ಪ್ರಸ್ತುತ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಖಾಜಾಂಚಿ ಹೆಚ್.ಎಂ.ನಂದಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ವಿ.ಪಿ.ಸುರೇಶ್, ಎಸ್.ಎಂ.ಚಂಗಪ್ಪ, ರಾಜ್ಯ ಘಟಕದ ಉಪಾಧ್ಯಕ್ಷ ಎ.ಕೆ.ಹ್ಯಾರಿಸ್, ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಯುವ ಘಟಕದ ಅಧ್ಯಕ್ಷ ಎಸ್.ಎ.ಹನೀಫ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ, ಜಿಲ್ಲಾ ವಕ್ತಾರ ಟಿ.ಇ.ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಿ.ಬಿ.ಸತೀಶ್ ಕುಮಾರ್, ಕೆ.ಎ.ಇಸ್ಮಾಯಿಲ್, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಝಾಕ್, ಘಟಕದ ಅಧ್ಯಕ್ಷರಾದ ಪಿ.ವಿ.ಜಾನ್ಸನ್, ಚುಮ್ಮಿದೇವಯ್ಯ, ಅಂಬೆಕಲ್ಲು ನವೀನ್ ಕುಶಾಲಪ್ಪ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ಡಿ.ಸಿ.ಸಿ. ಉಪಾಧ್ಯಕ್ಷ ಪೆರುಮಂಡ ಸುರೇಶ್, ಕೊಟ್ಟಮುಡಿ ಹಂಸ, ಗೀತಾ ಧರ್ಮಪ್ಪ, ಪ್ರಮುಖರಾದ ಕಾವೇರಮ್ಮ ಸೋಮಣ್ಣ, ಜಿ.ಪಂ ಸದಸ್ಯೆ ಸುನಿತಾ, ಡಿ.ಸಿ.ಸಿ. ಸದಸ್ಯರುಗಳಾದ ರಾಜೇಶ್ ಪದ್ಮನಾಭ, ರಾಫಿ, ಶಾಫಿ ಎಡಪಾಲ, ಮೊಯ್ದು ಬೆಟ್ಟಗೇರಿ, ಕೆದಂಬಾಡಿ ರಿಷಿಕುಮಾರ್, ಅಬ್ದುಲ್ ರೆಹಮಾನ್ ಬಾಪು, ಲಕ್ಷ್ಮಿ, ಉಸ್ಮಾನ್, ಎಂ.ಎಸ್.ಪೂವಯ್ಯ ಹಾಗೂ ಸೇವಾದಳದ ಜಿಲ್ಲಾ ಮುಖ್ಯಸ್ಥರಾದ ಪ್ರೇಮಕೃಷ್ಣಪ್ಪ, ರಶೀದ್, ಖಲೀಲ್ ಬಾಷಾ, ಷಜಿ, ರಾಘವೇಂದ್ರ ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಹೊಸೂರು ಸೂರಜ್ ಸ್ವಾಗತಿಸಿ, ತೆನ್ನಿರ ಮೈನಾ ಕಾರ್ಯಕ್ರಮವನ್ನು ನಿರೂಪಿಸಿದರು. ನೆರವಂಡ ಉಮೇಶ್ ಪ್ರತಿಜ್ಞಾ ವಿಧಿ ಬೋಧಿಸಿ, ಅಬ್ದುಲ್ ರಜಾಕ್ ವಂದಿಸಿದರು. ಇತ್ತೀಚಿಗೆ ನಿಧಾನರಾದ ಕಾಂಗ್ರೆಸ್ ಮುಖಂಡರಾದ ಅಶೋಕ್ ಚೆಟ್ಟಿಯಪ್ಪ, ಕೆ.ಎಂ.ಗಣಪತಿ ಹಾಗೂ ಸಿಎಎ ಪ್ರತಿಭಟನೆಯಲ್ಲಿ ಮರಣ ಹೊಂದಿದ ಅಮಾಯಕರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.







