ಮನೆ ಕಳ್ಳತನ ಪ್ರಕರಣ: ಆರೋಪಿಗೆ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ ಕೋರ್ಟ್
ಕಲಬುರಗಿ, ಡಿ.28: ಮನೆಯ ಕೀಲಿ ಮುರಿದು 1.3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಗೆ ಕಲಬುರಗಿ ಐದನೆ ಹೆಚ್ಚುವರಿ ಜೆಎಂಎಫ್ ಕೋರ್ಟ್ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದೆ.
ಆಜಾದಪುರ ರಸ್ತೆಯ ಮುಹಮ್ಮದ್ ಅಲ್ಮಾಸ್ ಶಿಕ್ಷೆಗೊಳಗಾದವನು. 2017ರ ಮೇ 28ರಂದು ಚಿಂಚೋಳಿ ಕ್ರಾಸ್ ಸಮೀಪದ ಸಾಗರ ಸಿಟಿಯಲ್ಲಿರುವ ಉದಯಕುಮಾರ ಮಠಪತಿ ಅವರ ಮನೆಗೆ ನುಗ್ಗಿದ್ದ ಮುಹಮ್ಮದ್ ಅಲ್ಮಾಸ್ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಗ್ರಾಮೀಣ ಠಾಣೆ ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಕೀಲರ ವಾದ ಆಲಿಸಿದ ನ್ಯಾಯಾಧೀಶ ಪಂಕಜಾ ಕೊಣ್ಣೂರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಸರಕಾರದ ಪರವಾಗಿ 5ನೆ ಸಹಾಯಕ ಸರಕಾರಿ ಅಭಿಯೋಜಕಿ ಛಾಯಾದೇವಿ ಪಾಟೀಲ ವಾದ ಮಂಡಿಸಿದ್ದರು.
Next Story





