Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ನೌಕಾಪಡೆಯ ಮೊದಲ ಮಹಿಳಾ ಪೈಲೆಟ್

ನೌಕಾಪಡೆಯ ಮೊದಲ ಮಹಿಳಾ ಪೈಲೆಟ್

ಬಸನಗೌಡ ಪಾಟೀಲಬಸನಗೌಡ ಪಾಟೀಲ29 Dec 2019 12:10 AM IST
share
ನೌಕಾಪಡೆಯ ಮೊದಲ ಮಹಿಳಾ ಪೈಲೆಟ್

ಆಗಸದಲ್ಲಿ ಹಾರುವ ಆಸೆ ಪಟ್ಟವಳು ಆ ಹತ್ತರ ಬಾಲೆ. ಇಂದು ಆಗಸದಲ್ಲಿ ನೂರು ವರ್ಷಗಳ ಕಾಲ ಹಾರಟ ನಡೆಸಿ ಇಡೀ ದೇಶವೆ ತನ್ನತ್ತ ತಿರುಗಿ ನೋಡುವ ಹಾಗೇ ಮಾಡಿದ ಛಲ ಬೀಡದ ಧೀರ ಮಹಿಳೆ. ಸದಾಕಾಲ ಆಗಸದತ್ತ ಮುಖ ಮಾಡಿ ನಾನು ಮುಂದೊಂದು ದಿನ ಪೈಲೆಟ್ ಆಗಬೇಕು ಅಂದುಕೊಂಡ ಅವಳನ್ನು ಸದಾಕಾಲ ಸೆಳೆಯುತ್ತಿದ್ದ ಒಂದು ವಸ್ತುವೇ ವಿಮಾನ. ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲದು ಎಂಬ ಮಾತಿಗೆ ಹಿಡಿದ ಕನ್ನಡಿಯೇ ಇವರು. ವಿಮಾನ ಹಾರಿಸುವ ಕನಸು ಕಂಡಾಕೇ ಇಂದು ದೇಶದ ಪ್ರಮುಖ ಭಾಗವೇ ಆಗಿದ್ದಾರೆ.

ನಮ್ಮ ಭಾರತೀಯ ಹೆಮ್ಮೆಯ ನೌಕಾಪಡೆಯ ಮೊದಲ ಮಹಿಳಾ ಪೈಲೆಟ್ ಆಗಿ ನೇಮಕಗೊಂಡವರೇ ಸುಭಾಂಗಿ ಸ್ವರೂಪ್. ಮೂಲತಃ ಬಿಹಾರದ ಮುಝಪ್ಫರ್‌ಪುರದವರಾದ ಇವರು ವೆಲ್ಲೋರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಯೋಟೆಕ್ನಾಲಜಿ ಇಂಜಿನಿಯರ್ ಪದವಿ ಹೊಂದಿದ್ದು ಇದೀಗ ನಮ್ಮ ಸೇನೆಯ ಮುಖ್ಯ ಸ್ಥಾನದಲ್ಲಿದ್ದಾರೆ. ಸೇನೆ ಎಂದರೆ ಕೇವಲ ಪುರುಷರಿಗೆ ಎಂಬ ಮಾತು ಇಂದು ಹಳೆಯದಾಗುತ್ತ ಬರುತ್ತಿದೆ. ದೇಶದ ಗಡಿಯಲ್ಲಿ ಬಂದೂಕು ಹಿಡಿದು, ಪ್ರಮುಖ ಹೆಲಿಕ್ಯಾಪ್ಟರ್ ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಇಂದು ಮಹಿಳೆಯರೆ ಮುನ್ನಡೆಸುತ್ತಿದ್ದಾರೆ.

ಸುಭಾಂಗಿ ಅವರ ಮನೆಯಲ್ಲಿ ಸದಾಕಾಲ ದೇಶಭಕ್ತಿಯೇ ತುಂಬಿರುತ್ತಿತ್ತು. ಕಾರಣ, ತಂದೆ ನೇವಲ್ ಕಮಾಂಡರ್ ಗ್ಯಾನ ಸ್ವರೂಪ್ ಮತ್ತು ತಾಯಿ ಕಲ್ಪನಾ ಸ್ವರೂಪ್.

ಮಗಳ ಆಸೆಗೆ ಎಂದೂ ಅಡ್ಡಿ ಮಾಡದೆ ಅವಳ ಆಸೆಯಂತೆ ಬೆನ್ನೆಲುಬಾಗಿ ನಿಂತವರು ಅವರ ಹೆತ್ತವರು. ಸೇನೆಯ ಹಲವು ಪರಿಕ್ಷೆಗಳಲ್ಲಿ ಫೇಲಾದರೂ ಧೃತಿಗೆಡದ ಇವರು ಮತ್ತೆ ತಮ್ಮ ಮಗಳ ಕನಸಿಗೆ ರೆಕ್ಕೆ ಕಟ್ಟಲು ಪ್ರಾರಂಭಿಸಿದರು. ಮುಂದೊಂದು ದಿನ ನಾನು ಆಗಸದೆತ್ತರ ಹಾರುತ್ತೇನೆ ನೋಡುತ್ತಿರು ಅಮ್ಮ ಎನ್ನುತ್ತಿದ್ದರಂತೆ.

2018 ರಲ್ಲಿ ಸಿಕ್ಕ ಸೇನೆಯ ಪರೀಕ್ಷೆಯ ಅವಕಾಶ ಸದುಪಯೋಗ ಪಡಿಸಿಕೊಂಡ ಇವರು ಹೈದರಾಬಾದ್‌ನ ದುಂಡಿಗಲ್‌ನಲ್ಲಿರುವ ನೇವಲ್ ತರಬೇತಿ ಅಕಾಡಮಿಯಲ್ಲಿ ತರಬೇತಿ ಪೂರ್ಣಗೊಳಿಸಿ

2019ರ ಡಿಸೆಂಬರ್‌ನಲ್ಲಿ ಸೇನೆಯ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೇರಳದ ಕಣ್ಣೂರಿನಲ್ಲಿನ ಮಹಿಳಾ ತರಬೇತಿ ಅವಧಿ ಮೊದಲ ಬ್ಯಾಚ್‌ನ ಮಹಿಳೆ ಇವರಾಗಿದ್ದು ಭಾರತೀಯ ನೌಕಾಪಡೆಯ ವಿಮಾನಗಳನ್ನು ಮುನ್ನಡೆಸಲಿದ್ದಾರೆ. ಇಲ್ಲಿಯ ತನಕ ಕೇವಲ ಸಿನೆಮಾದಲ್ಲಿ ನಾವು ಮಹಿಳೆಯರು ಯುದ್ಧದಲ್ಲಿ ಭಾಗವಹಿಸಿವುದು, ಅತ್ಯಾಧುನಿಕ ಶಶ್ತ್ರಾಸ್ರ್ತ ಬಳಸುತ್ತಿದ್ದುದು, ವಿಮಾನ ಹಾರಿಸುತ್ತಿದ್ದುದು ನೋಡಿದ್ದೇವೆ. ಇಂದು ಭಾರತೀಯ ಮಹಿಳೆಯರು ನಿಜ ಜೀವನದಲ್ಲಿಯೇ ಅದನ್ನು ಸಾಧಿಸಿ ತೋರಿಸಿದ್ದಾರೆ. ಇದಕ್ಕೆ ಅಲ್ಲವೇ ಮಹಿಳಾ ಕ್ತಿಯ ಮುಂದೆ ಮತ್ಯಾವ ಶಕ್ತಿ ಇಲ್ಲ ಎಂದಿರುವುದು.

share
ಬಸನಗೌಡ ಪಾಟೀಲ
ಬಸನಗೌಡ ಪಾಟೀಲ
Next Story
X