Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಅಂದಿನ ಮಂಟೋ- ಇಂದಿನ ನಾನು....!

ಅಂದಿನ ಮಂಟೋ- ಇಂದಿನ ನಾನು....!

ಇಸ್ಮತ್ ಪಜೀರ್ಇಸ್ಮತ್ ಪಜೀರ್29 Dec 2019 12:17 AM IST
share
ಅಂದಿನ ಮಂಟೋ- ಇಂದಿನ ನಾನು....!

ಎನ್‌ಆರ್‌ಸಿಯ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತುಂಗಕ್ಕೇರಿದ್ದಾಗ ನಾನು ಫೇಸ್‌ಬುಕ್‌ನ ನನ್ನ ಅನೇಕ ಹಿಂದೂ ಗೆಳೆಯರ ಪ್ರೊಫೈಲ್ ಮತ್ತು ಕೆಲವು ಸಜ್ಜನ ಹಿಂದೂಗಳ ಟೈಮ್‌ಲೈನ್‌ಗೆ ಆಗಾಗ ಇಣುಕುತ್ತಿದ್ದೆ. ನನಗೆ ನಿರಾಶೆಯೇ ಕಾದಿತ್ತು. ಮತಿಭ್ರಮಣೆಯಾಗುವುದೊಂದೇ ಉಳಿದಿತ್ತು. ಆ ಮಟ್ಟಿಗೆ ನಾನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಬದುಕಿನ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತಿದ್ದ ಮತ್ತು ಮನೆಯ ಸಂಕಷ್ಟಗಳನ್ನೆಲ್ಲಾ ನನ್ನಲ್ಲಿ ತೋಡಿಕೊಳುತ್ತಿದ್ದ ಗೆಳೆಯರಲ್ಲಿ ಬಹುತೇಕರು ಎನ್‌ಆರ್‌ಸಿಯ ಪರವಿದ್ದರು ಮಾತ್ರವಲ್ಲ ಇದು ಹಿಂದೂ ರಾಷ್ಟ್ರ, ಇಲ್ಲಿ ಹಿಂದೂಗಳಿಗಲ್ಲದೆ ಬೇರೆ ಯಾರಿಗೂ ಬದುಕುವ ಹಕ್ಕಿಲ್ಲ ಎಂಬರ್ಥದಲ್ಲಿ ಬರೆದು ಹಾಕಿದ್ದರು. ಅವರಲ್ಲಿ ಎಂತಹವರೆಲ್ಲಾ ಇದ್ದರೆಂದರೆ ನನ್ನಿಂದ ವೈಯಕ್ತಿಕವಾಗಿ ಸಹಾಯ ಪಡೆದವರು, ನನ್ನದೇ ರಕ್ತ ಪಡೆದು ಜೀವವುಳಿಸಿಕೊಂಡವ, ಸಹೋದರಿಯ ಮದುವೆಗೆ ನನ್ನವಳ ಒಡವೆಗಳನ್ನು ಕಡ ಪಡಕೊಂಡವರು.... ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ ನನ್ನ ಆ ಗೆಳೆಯರು ಯಾರೂ ಆರೆಸ್ಸೆಸ್ ಅಥವಾ ಸಂಘಪರಿವಾರದವರೂ ಅಲ್ಲ. ನನಗೀಗಲೂ ಅವರು ನನ್ನನ್ನು ದ್ವೇಷಿಸುತ್ತಾರೆಂದೆನಿಸುವುದಿಲ್ಲ ಮತ್ತು ಆಂತರ್ಯದಲ್ಲಿ ಅವರಿಗೆ ನಾನು ಪಾಲಿಸುವ ಧರ್ಮದ ಬಗ್ಗೆ ದ್ವೇಷವೂ ಇಲ್ಲ. ಹಾಗಾದರೆ ಅವರು ಯಾಕೆ ಹಾಗೆಲ್ಲಾ ಬರೆದುಕೊಂಡಿದ್ದಾರೆ..? ಇದನ್ನೇ ಸಮೂಹ ಸನ್ನಿಯೆನ್ನುವುದು.

ಅವರು ಏಕಾಂಗಿಯಾಗಿದ್ದಾಗ ಅಥವಾ ನನ್ನ ಜೊತೆಗಿರುವಾಗ ಹಾಗೆ ಎಂದೂ ಯೋಚಿಸಲಾರರು ಎಂದೇ ನನ್ನ ದೃಢವಾದ ನಂಬಿಕೆ. ಅವರಿಂದ ಸಮೂಹ ಸನ್ನಿಯ ಮನೋಸ್ಥಿತಿ ಹಾಗೆ ಬರೆಯಿಸಿತ್ತು ಎಂದೇ ನಾನು ನಂಬಿರುವೆ ಮತ್ತು ಮುಂದೆಯೂ ನಂಬುತ್ತೇನೆ. ನನಗೆ ಅವರ ಬಗ್ಗೆ ಕಿಂಚಿತ್ತೂ ದ್ವೇಷವಿಲ್ಲ. ಅವರಿಗೆ ನಾನಿಲ್ಲದ ಅವರ ಬಗ್ಗೆ ಯೋಚಿಸಲೂ ಸಾಧ್ಯವಾಗದು.

ಅಂತಹ ಕೆಲವು ಗೆಳೆಯರ ಬಳಿ ನಾನು ನೇರವಾಗಿ ಮಾತನಾಡುತ್ತ ಕೇಳಿದೆ.. ಏನು ಮಾರಾಯ.. ನಾವು ಇಲ್ಲಿರುವುದು ನಿಮಗೆ ಅಷ್ಟೂ ಇಷ್ಟವಿಲ್ಲವೇ...?

ಯಾರು ಹಾಗೆಂದರು ಮಾರಾಯ..?

ಯಾರು ಹೇಳುವುದ್ಯಾಕೆ...ನಾನೇ ನೋಡಿದೆನಲ್ಲಾ....?

ಅದುವಾ.....ಅದು ನಿನ್ನಂತಹವರ ಬಗೆಗಲ್ಲ ಮಾರಾಯ... ನಾನು ಮುಸ್ಲಿಮನೇ ಮಾರಾಯ..

ನಾನೂ ನಮಾಝ್ ಮಾಡುತ್ತೇನೆ, ನಾನೂ ದನದ ಮಾಂಸ ತಿನ್ನುತ್ತೇನೆ.

ಅದೇನು ನಮಗೆ ಗೊತ್ತಿಲ್ಲದ್ದಾ...?

ಮತ್ಯಾಕೆ ಹಾಗೆ ಬರೆದಿರಿ..?

ಏ ಅದೆಲ್ಲಾ ಬಿಡು ಮಾರಾಯ..ನಿನ್ನನ್ನು ನಾವು ದ್ವೇಷಿಸಲಾಗುತ್ತಾ...?

ಸಾದತ್ ಹಸನ್ ಮಂಟೋ ಎಂಬ ಜಗತ್ಪ್ರಸಿದ್ಧ ಮತ್ತು ಅತ್ಯಂತಿಕವಾದ ವಿವಾದಾತ್ಮಕ ಉರ್ದು ಸಣ್ಣ ಕತೆಗಾರನೂ ಇಂತಹದ್ದನ್ನೇ ಅನುಭವಿಸಿದ್ದ. ದೇಶ ವಿಭಜನೆಯ ಕಾಲದ ಅತಿಮಾನುಷ ಕ್ರೌರ್ಯಗಳನ್ನು ಕಂಡು ಮಾನಸಿಕ ಸ್ಥಿಮಿತವನ್ನೇ ಕಳಕೊಂಡಿದ್ದ ಮಂಟೋ ವಿಭಜನೆಯ ಕಾಲದ ಕ್ರೌರ್ಯವನ್ನು, ಹಿಂಸೆಯನ್ನು ಬರೆದಷ್ಟು ಮನೋಜ್ಞವಾಗಿ ಇನ್ಯಾವ ಲೇಖಕನೂ ಬರೆದಿಲ್ಲ. ಮಂಟೋನ ಮಾನವೀಯ ಅಂತಃಕರಣ ಆ ಕಾಲದ ಇತರೆಲ್ಲಾ ಲೇಖಕರಿಗಿಂತಲೂ ಆತನನ್ನು ಭಿನ್ನವಾಗಿ ನೋಡುವಂತೆ ಮಾಡುತ್ತದೆ. ಆತ ಜನರನ್ನು ಹಿಂದೂ ಮುಸ್ಲಿಮರೆಂದು ಪ್ರತ್ಯೇಕಿಸಿ ನೋಡಲಿಲ್ಲ. ಅದಕ್ಕೆ ಆತ ಬರೆದ ಸುಮಾರು ಇನ್ನೂರೈವತ್ತಕ್ಕೂ ಮಿಕ್ಕಿದ ಸಣ್ಣ ಕತೆಗಳಲ್ಲಿ ನೂರರಷ್ಟು ಕತೆಗಳು ಸಾಕ್ಷವೊದಗಿಸುತ್ತದೆ. ಆತನ ಕೇವಲ ಎರಡು ಗೆರೆಯ ಕತೆ ಮಿಸ್ಟೇಕ್ ಒಂದನ್ನೇ ನೋಡಿದರೆ ಸಾಕು.

ಹೊಟ್ಟೆಯನ್ನು ಸೀಳಿದ ಚಾಕು ಸೀಳುತ್ತಾ ಬಂದು ಪೈಜಾಮದ ಲಾಡಿ ಬಿಚ್ಚಿಸಿತು...

ಅಯ್ಯೋ ಎಂತಹಾ ‘ಮಿಸ್ಟೇಕ್’ ಮಾಡಿ ಬಿಟ್ಟೆನೆಲ್ಲಾ

ಈ ಕತೆಯನ್ನು ಇನ್ನೊಮ್ಮೆ ಓದಿ. ಒಂದು ವೇಳೆ ಸತ್ತವನು ಮುಸ್ಲಿಮನಾದರೆ ಕೊಂದವನೂ ಮುಸ್ಲಿಮ್. ಒಂದು ವೇಳೆ ಸತ್ತವನು ಹಿಂದೂವಾದರೆ ಕೊಂದವನೂ ಹಿಂದೂ.

ಕೊಲೆಗಾರ ಸತ್ತವನ ಜನನಾಂಗ ನೋಡಿ ನಿರ್ಧರಿಸುತ್ತಾನೆ. ಇದರಲ್ಲಿ ಮಂಟೋನ ತಂತ್ರಗಾರಿಕೆಯೂ ಅಡಗಿದೆ. ಅವನೊಳಗಿನ ಅತ್ಯಂತ ಆರ್ದ್ರ ಹೃದಯದೊಳಗಿನ ತಲ್ಲಣವೂ ಇದೆ. ಮಂಟೋನಿಗೆ ಮನುಷ್ಯನ ಧರ್ಮ ಯಾವತ್ತೂ ಮಹತ್ವದ್ದಾಗಿರಲಿಲ್ಲ. ಆತನ ಕಾಳಜಿ ಕೇವಲ ಮನುಷ್ಯತ್ವ ಮಾತ್ರವಾಗಿತ್ತು. ಈ ಕತೆಯನ್ನು ಬರೆದಾಗ ಮಂಟೋ ಇನ್ನೂ ಭಾರತದಲ್ಲೇ ಇದ್ದ.

ಕೆಲದಿನಗಳ ಹಿಂದಷ್ಟೇ ಓರಗೆಯವರಾಗಿದ್ದವರು, ಗೆಳೆಯರಾಗಿದ್ದವರು ಇಂದು ಪರಸ್ಪರರನ್ನು ಕೊಲ್ಲುವ ಮಟ್ಟಿಗೆ ಅತಿಮಾನುಷ ಕ್ರೌರ್ಯವನ್ನು ಒಪ್ಪಿಕೊಂಡದ್ದಾದರೂ ಹೇಗೆ ಎಂದು ಯೋಚಿಸುತ್ತಲೇ ಆತ ಮಾನಸಿಕವಾಗಿ ಜರ್ಜರಿತನಾಗಿ ಬಿಟ್ಟಿದ್ದ. ಹಿಂದೂ ಮುಸ್ಲಿಮ್ ಸೋದರರ ಯುದ್ಧ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದ ಆ ದಿನಗಳಲ್ಲಿ ಮಂಟೋ ಮತ್ತು ಆತನ ಆತ್ಮೀಯ ಗೆಳೆಯನಾದ ಅಂದಿನ ಪ್ರಸಿದ್ಧ ಹಿಂದಿ ಸಿನೆಮಾ ನಟ ಶ್ಯಾಂ ಜೊತೆಗಿದ್ದಾಗ ಪಾಕಿಸ್ತಾನದ ರಾವಲ್ಪಿಂಡಿಯಿಂದ ಜೀವದ ಹಂಗು ತೊರೆದು ಸಿಖ್ ಪರಿವಾರ ಶ್ಯಾಂ ಜೊತೆ ಮಾತಿಗೆ ನಿಂತು. ಆ ಪರಿವಾರದ ಮುಖ್ಯಸ್ಥ ತಾನು ಕಂಡಿದ್ದ ಭೀಕರ ಹಿಂಸಾಚಾರದ ಕತೆಗಳನ್ನು ಇವರ ಮುಂದೆ ನಿರೂಪಿಸುತ್ತಿದ್ದಾಗ ಅದನ್ನು ಕೇಳುತ್ತಾ ಶ್ಯಾಂ ರೋಷದಿಂದ ಕುದಿಯುತ್ತಿದ್ದ. ಅತ್ಯಂತ ಸೂಕ್ಷ್ಮ ಮನಸ್ಸಿನ ಮಂಟೋ ತನ್ನ ಪ್ರಾಣ ಸ್ನೇಹಿತ ಶ್ಯಾಂನ ಮುಖದಲ್ಲಾದ ಏರಿಳಿತಗಳನ್ನೆಲ್ಲಾ ಗಮನಿಸಿದ್ದ. ಅವರು ಅಲ್ಲಿಂದ ಹೊರಟು ಹೋದ ಎಷ್ಟೋ ಹೊತ್ತಿನ ಬಳಿಕ ಮಂಟೋ ನಾನೂ ಒಬ್ಬ ಮುಸಲ್ಮಾನ, ನಿನಗೆ ನನ್ನನ್ನು ಕೊಲ್ಲಬೇಕೆಂದೆನಿಸುವುದಿಲ್ಲವೇ...?

ಶ್ಯಾಂ ತುಂಬಾ ಗಂಭೀರವಾಗಿ ಇಲ್ಲ ಈಗ ಕೊಲ್ಲಲಾರೆ, ಆ ಸಿಖ್ಖನ ಬಾಯಿಯಿಂದ ಮುಸಲ್ಮಾನರು ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದ್ದ ಕತೆಯನ್ನು ಕೇಳುತ್ತಿದ್ದಾಗ ನಿನ್ನನ್ನು ನಾನು ಕೊಲ್ಲಬಹುದಿತ್ತು. ತನ್ನ ಪ್ರಾಣ ಸ್ನೇಹಿತ ಶ್ಯಾಂನ ಬಾಯಿಯಿಂದ ಇಂತಹ ಮಾತುಗಳನ್ನು ಕೇಳಿಸಿದ ಮಂಟೋನಿಗೆ ಹೃದಯಾಘಾತವಾದಂತೆನಿಸುತ್ತದೆ. ಮುಂದೆ ಮಂಟೋ ಭಾರತ ತೊರೆಯಲು ಇದೇ ಕಾರಣವಾಗುತ್ತದೆ.

ಒಮ್ಮೆ ಇದ್ದಕ್ಕಿದ್ದಂತೆ ಮಂಟೋ ದೇಶ ತೊರೆಯುವ ವಿಚಾರ ಹೇಳಿದಾಗ ಶ್ಯಾಂ ಮತ್ತು ಮಂಟೋನ ಇನ್ನೋರ್ವ ಆತ್ಮೀಯ ಗೆಳೆಯನೂ ಪ್ರಸಿದ್ಧ ನಟನೂ ಆದ ಅಶೋಕ್ ಕುಮಾರ್ ದಂಗಾಗಿ ಬಿಟ್ಟರು. ಮಂಟೋನ ಈ ದಿಢೀರ್ ತೀರ್ಮಾನಕ್ಕೆ ಕಾರಣವೇನೆಂದು ಅವರು ಕೇಳಿದಾಗ ಮಂಟೋ ತನ್ನ ಪುರುಷಾರ್ಥ ಕತೆಯನ್ನು ಓದುವಂತೆ ತಿಳಿಸುತ್ತಾನೆ. ಆತನ ಪುರುಷಾರ್ಥ ಕತೆ ಬೇರೇನೂ ಅಲ್ಲ.. ಅದು ಪಾಕಿಸ್ತಾನದಿಂದ ಜೀವದ ಹಂಗು ತೊರೆದು ಓಡಿ ಬಂದ ಸಿಖ್ ಪರಿವಾರ ಹೇಳಿದ ಕತೆ ಮತ್ತು ಶ್ಯಾಂ -ಮಂಟೋನ ನಡುವೆ ನಡೆದ ಮಾತುಕತೆಯೇ ಆಗಿದೆ. ಕಥಾ ನಾಯಕ ಮುಮ್ತಾಝ್ ಮತ್ತು ಆತನ ಸ್ನೇಹಿತ ಜುಗಲ್ ಮಧ್ಯೆ ನಡೆಯುವ ಮಾತುಕತೆಯಲ್ಲಿ ಮಂಟೋ-ಶ್ಯಾಂಗೆ ಕೇಳಿದ ಪ್ರಶ್ನೆಯನ್ನೂ, ಶ್ಯಾಂ ನೀಡಿದ ಉತ್ತರವನ್ನೂ ಮಂಟೋ ಅತ್ಯಂತ ತಂತ್ರಪೂರ್ವಕವಾಗಿ ತಂದು ಕತೆ ಹೆಣೆದಿದ್ದ.

ವಾಸ್ತವದಲ್ಲಿ ಇಂತಹ ಮಾತುಕತೆಯಿಂದಾಗ ಮಂಟೋ ದೇಶ ತೊರೆಯಬಹುದೆಂಬ ಸಣ್ಣದೊಂದು ಸುಳಿವು ಸಿಕ್ಕಿದ್ದರೂ ಶ್ಯಾಂ ತನ್ನ ಮನದೊಳಗಿನ ರೋಷವನ್ನು ಮಂಟೋನ ಮುಂದೆ ಹೊರಗೆಡಹುತ್ತಿರಲಿಲ್ಲ. ಮಂಟೋ ದೇಶ ತೊರೆದ ಬಳಿಕ ತನ್ನ ಪ್ರೀತಿಯ ತಾಯ್ನಿಡನ್ನು, ಜೀವದ ಗೆಳೆಯರಾದ ಶ್ಯಾಂ ಮತ್ತು ಅಶೋಕ್ ಕುಮಾರ್‌ರನ್ನು ನೆನೆದು ಬಹಳಷ್ಟು ಪರಿತಪಿಸಿದ. ಆತ ಇವರೊಂದಿಗೆ ಪತ್ರ ಸಂಪರ್ಕವಿಟ್ಟುಕೊಂಡಿದ್ದ. ಮಂಟೋ ಭಾರತ ತೊರೆದ ಬಳಿಕ ಆರ್ಥಿಕವಾಗಿ ಮತ್ತಷ್ಟು ಜರ್ಜರಿತನಾದ. ಶ್ಯಾಂ ಮತ್ತು ಅಶೋಕ್ ಕುಮಾರ್ ಮಂಟೋನಿಗೆಂದು ಆಗಾಗ ತುಸು ದುಡ್ಡನ್ನೂ ಕಳುಹಿಸುತ್ತಿದ್ದರು.

ಅಂದು ಮಂಟೋನ ಮುಂದೆ ಪಾಕಿಸ್ತಾನವೆಂಬ ಆಯ್ಕೆಯಿತ್ತು... ಇಂದು ನನ್ನ ಮುಂದಿರುವುದು ಡಿಟೆಂಶನ್ ಹೋಮ್ ಎಂಬ ಆಯ್ಕೆ ಮಾತ್ರ. ನನಗಾಗಿ ಪಾಕಿಸ್ತಾನದ ಬಾಗಿಲು ಯಾವತ್ತೂ ತೆರೆಯುವುದಿಲ್ಲ. ತೆರೆದರೂ ನನ್ನ ಆಯ್ಕೆ ಖಂಡಿತಾ ಅದಾಗದು...

share
ಇಸ್ಮತ್ ಪಜೀರ್
ಇಸ್ಮತ್ ಪಜೀರ್
Next Story
X