ಪೇಜಾವರ ಶ್ರೀ ನಿಧನ : ಪರ್ಕಳ ಮಾರ್ಕೆಟ್ ಫ್ರೆಂಡ್ಸ್ ನಿಂದ ಶ್ರದ್ಧಾಂಜಲಿ
ಪರ್ಕಳ, ಡಿ.29: ಪರ್ಕಳ ಮಾರ್ಕೆಟ್ ಫ್ರೆಂಡ್ಸ್ ವತಿಯಿಂದ ಅಗಲಿದ ಪೇಜಾವರ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ವನ್ನು ಪರ್ಕಳದ ಮಾರ್ಕೆಟ್ ಬಳಿಯ ಮೈದಾನದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.
ರಾಮಕೃಷ್ಣಾ ಕೊಡ್ಗಿ ದೀಪ ಬೆಳಗಿಸಿ ಸ್ವಾಮೀಜಿಗಳಿಗೆ ನುಡಿನಮನ ಸಲ್ಲಿಸಿ ದರು. ಸಂಸ್ಥೆಯ ಅಧ್ಯಕ್ಷ ಬಾಲಕೃಷ ಶೆಟ್ಟಿ ಬನ್ನಂಜೆ, ಗಣೇಶ್ ರಾಜ್ ಸರಳೇಬೆಟ್ಟು ಜಯಶೆಟ್ಟಿ ಬನ್ನಂಜೆ, ಗಾಯಕ ಉಮೇಶ್ ಮಣಿಪಾಲ, ರಾಜೇಶ್ ಪ್ರಭು ಪರ್ಕಳ, ಸಂತೋಷ್ ವಿ ನಾಯ್ಕ್, ಶಿವ ಮಾರುತಿ ನಗರ, ರವಿ ಪೂಜಾರಿ ಬೊಳ್ಜೆ, ತಿಮ್ಮಪ್ಪ ಶೆಟ್ಟಿ ಶೆಟ್ಟಿಬೆಟ್ಟು ಮೊದಲಾದವರು ಶ್ರದ್ಧಾಂಜಲಿ ಅರ್ಪಿಸಿದರು.
Next Story