ಯುವಜನತೆ ಅರಾಜಕತೆಯ ದ್ವೇಷಿಗಳು: ಪ್ರಧಾನಿ ಮೋದಿ
Photo: PTI
ಹೊಸದಿಲ್ಲಿ, ಡಿ.29: ದೇಶದ ಯುವಜನತೆ ವ್ಯವಸ್ಥೆಯಲ್ಲಿ ವಿಶ್ವಾಸ ಇರಿಸಿಕೊಂಡಿದ್ದು, ವ್ಯವಸ್ಥೆ ಸೂಕ್ತವಾಗಿ ಪ್ರತಿಸ್ಪಂದಿಸದೆ ಇದ್ದಾಗ ಆ ಬಗ್ಗೆ ಪ್ರಶ್ನಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸುವ ಧೋರಣೆ ಹೊಂದಿದ್ದಾರೆ. ಇದಕ್ಕಾಗಿ ಅವರನ್ನು ಶ್ಲಾಘಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2019ರ ಅಂತಿಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನತೆ ಅರಾಜಕತೆ , ಅಸ್ಥಿರತೆ ಮತ್ತು ಅವ್ಯವಸ್ಥೆಯನ್ನು ದ್ವೇಷಿಸುತ್ತಾರೆ. ಜಾತಿವಾದ ಮತ್ತು ಸ್ವಜನ ಪಕ್ಷಪಾತವನ್ನು ಇಷ್ಟಪಡುವುದಿಲ್ಲ. ಮುಂಬರುವ ದಶಕಗಳಲ್ಲಿ ನವಭಾರತ ನಿರ್ಮಾಣದಲ್ಲಿ ಯುವ ಭಾರತ ಗಮನಾರ್ಹ ಪಾತ್ರ ವಹಿಸಲಿದೆ . ಯುವಪೀಳಿಗೆ ದೇಶವನ್ನು ಉನ್ನತ ಮಟ್ಟಕ್ಕೆ ಎತ್ತರಿಸುವ ಹೊಸ ವ್ಯವಸ್ಥೆ ಮತ್ತು ಅನುಶಾಸನದ ಪ್ರತಿಬಿಂಬ ಮತ್ತು ಸಾಕಾರರೂಪವಾಗಿದೆ ಎಂದು ಹೇಳಿದರು.
ಜನತೆ ಖರೀದಿಯ ಸಂದರ್ಭ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದ ಅವರು, ಸಂಸತ್ ಅಧಿವೇಶನ ಅತ್ಯಂತ ಫಲಪ್ರದವಾಗಿದ್ದು ಕಳೆದ 60 ವರ್ಷಗಳ ದಾಖಲೆಯನ್ನು ಮುರಿದಿದೆ ಎಂದು ಪ್ರಧಾನಿ ಹೇಳಿದರು.