2020ರಲ್ಲಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯವನ್ನು ಮಣಿಸುವುದು ದೊಡ್ಡ ಸವಾಲು: ಗಂಗುಲಿ

ಹೊಸದಿಲ್ಲಿ, ಡಿ.29: ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಸ್ಟ್ರೇಲಿಯ ತಂಡಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯವನ್ನು ಅದರದೆ ನೆಲದಲ್ಲಿ ಸೋಲಿಸುವುದು ದೊಡ್ಡ ಸವಾಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ ಈ ವರ್ಷ ಆಸ್ಟ್ರೇಲಿಯ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಜಯಿಸಿ 71 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತ್ತು.
ಈ ಸಂದರ್ಭದಲ್ಲಿ ಸ್ಮಿತ್ ಹಾಗೂ ವಾರ್ನರ್ ಚೆಂಡು ವಿರೋಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧದಲ್ಲಿದ್ದರು. ‘‘2020ರ ಟೆಸ್ಟ್ ಸರಣಿಯು ನಮ್ಮ ತಂಡಕ್ಕೆ ದೊಡ್ಡ ಸವಾಲಾಗುವ ಸಾಧ್ಯತೆಯಿದೆ. ವಿರಾಟ್ ಸ್ವತಃ ಹಾಗೂ ತಂಡದ ಸ್ಥಾನಮಾನ ನಿಗದಿಪಡಿಸಿಕೊಡುವ ವಿಶ್ವಾಸ ನನಗಿದೆ. 2018ರ ಆಸ್ಟ್ರೇಲಿಯ ತಂಡ ಬಲಿಷ್ಠ ವಾಗಿರಲಿಲ್ಲ ಎಂಬ ಅಂಶ ಅವರಿಗೆ ಗೊತ್ತಿರಬಹುದು’’ ಎಂದರು. ಭಾರತ ಮುಂದಿನ ವರ್ಷ ಆಸ್ಟ್ರೇಲಿಯ ಪ್ರವಾಸವನ್ನು ಟ್ವೆಂಟಿ-20 ವಿಶ್ವಕಪ್‌ಗೆ ಮೊದಲು ಅಕ್ಟೋಬರ್ 18ರಿಂದ ನವೆಂಬರ್ 15ರ ತನಕ ಆಡಲಿದೆ.
Next Story





