ಅನಾಥರಿಗೆ ಆದಿತ್ಯನಾಥ್ ನೀಡಿದ್ದ ಕಂಬಳಿ ಕಿತ್ತುಕೊಂಡ ದುಷ್ಕರ್ಮಿಗಳು: ಪ್ರಕರಣ ದಾಖಲು
ಲಕ್ನೋ, ಡಿ. 29: ಆಶ್ರಯಧಾಮದಲ್ಲಿ ವಾಸಿಸುತ್ತಿರುವ ಅನಾಥರಿಂದ ಕಂಬಳಿ ತೆಗೆದುಕೊಂಡ ವ್ಯಕ್ತಿಗಳ ವಿರುದ್ಧ ಲಕ್ನೋ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕಂಬಳಿ ವಿತರಿಸುವ ಹಿನ್ನೆಲೆಯಲ್ಲಿ ಡಿಸೆಂಬರ್ 27ರಂದು ಸರಕಾರಿ ಆಸ್ಪತ್ರೆಗಳು ಹಾಗೂ ಅನಾಥರ ಆಶ್ರಯಧಾಮಕ್ಕೆ ಭೇಟಿ ನೀಡಿದ್ದರು. ಆದರೆ, ಆದಿತ್ಯನಾಥ್ ಅವರು ಹಿಂದಿರುಗಿದ ಕೂಡಲೇ ಅವರಿಂದ ಆ ಕಂಬಳಿಗಳನ್ನು ಹಿಂದೆ ಪಡೆದುಕೊಳ್ಳಲಾಗಿದೆ. ಆಡಳಿತ ಇದನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದೆ ಹಾಗೂ ಆರೋಪಿಗಳ ವಿರುದ್ಧ ಕ್ರಿಮಿಲ್ ಪ್ರಕರಣ ದಾಖಲಿಸುವ ಭರವಸೆ ನೀಡಿದೆ.
ಲಕ್ಷ್ಮಣ ಮೇಳ ಮೈದಾನ, ಡಾಲಿಗಂಜ್ ಹಾಗೂ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯ ಒಳಗಿರುವ ಅನಾಥರ ಶಿಬಿರಕ್ಕೆ ಆದಿತ್ಯನಾಥ್ ಭೇಟಿ ನೀಡಿದ್ದರು. ಈ ಭೇಟಿಯ ವೇಳೆ ಅವರು ಅನಾಥರೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲದೆ, ಸೌಲಭ್ಯ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದರು.
ಆದಿತ್ಯನಾಥ್ ಅವರ ಜೊತೆ ರಾಜ್ಯ ಸರಕಾರದ ಸಚಿವರಾದ ಮಹೇಂದ್ರ ಪ್ರತಾಪ್ ಸಿಂಗ್ ಅಶುತೋಷ್ ಟಂಡನ್, ಜಿಲ್ಲಾ ದಂಡಾಧಿಕಾರಿ, ಅಭಿಷೇಕ್ ಪ್ರಕಾಶ್ ಮೊದಲಾದವರು ಜೊತೆಗಿದ್ದರು.







