#IndiaSupportsCAA: ಪೌರತ್ವ ಕಾಯ್ದೆ ಬೆಂಬಲಿಸಿ ಪ್ರಧಾನಿಯಿಂದ ಟ್ವಿಟರ್ ಕ್ಯಾಂಪೇನ್

ಹೊಸದಿಲ್ಲಿ: ಪೌರತ್ವ ಕಾಯ್ದೆಯನ್ನು ಬೆಂಬಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ನಲ್ಲಿ #IndiaSupportsCAA ಎನ್ನುವ ಹೊಸ ಕ್ಯಾಂಪೇನ್ ಒಂದನ್ನು ಆರಂಭಿಸಿದ್ದಾರೆ.
ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಪ್ರಧಾನಿ ಈ ಕ್ಯಾಂಪೇನ್ ಆರಂಭಿಸಿದ್ದು, ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
" #IndiaSupportsCAA ಏಕೆಂದರೆ ಪೌರತ್ವ ಕಾಯ್ದೆ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯೇ ಹೊರತು ಯಾರೊಬ್ಬರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ" ಎಂದು ಪ್ರಧಾನಿಯವರ ವೈಯಕ್ತಿಕ ವೆಬ್ ಸೈಟ್ ನ ಟ್ವಿಟರ್ ಹ್ಯಾಂಡಲ್ ನಲ್ಲಿ ತಿಳಿಸಲಾಗಿದೆ.
ಇನ್ನೊಂದು ಟ್ವಿಟರ್ ಹ್ಯಾಂಡಲ್‌ನಲ್ಲಿ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ ಅವರು ಸಿಎಎ ಕುರಿತು ಮಾತನಾಡಿರುವ ವೀಡಿಯೊವನ್ನು ಶೇರ್ ಮಾಡಿಕೊಂಡಿರುವ ಮೋದಿ,‘ ಅವರು ಐತಿಹಾಸಿಕ ಸಂದರ್ಭಗಳನ್ನು ತೆರೆದಿಟ್ಟಿದ್ದಾರೆ,ನಮ್ಮ ಭ್ರಾತೃತ್ವ ಸಂಸ್ಕೃತಿಯನ್ನು ಅದ್ಭುತವಾಗಿ ಬಿಂಬಿಸಿದ್ದಾರೆ. ಪಟ್ಟಭದ್ರ ಹಿತಾಸಕ್ತಿಯುಳ್ಳ ಗುಂಪುಗಳಿಂದ ತಪ್ಪು ಮಾಹಿತಿಗಳ ಬಗ್ಗೆಯೂ ಅವರು ಟೀಕಿಸಿದ್ದಾರೆ ’ಎಂದು ಬರೆದಿದ್ದಾರೆ.





