'ವಾರ್ತಾಭಾರತಿ' 17ನೇ ವಾರ್ಷಿಕ ವಿಶೇಷಾಂಕ ಸಿಎಂ ಯಡಿಯೂರಪ್ಪರಿಂದ ಲೋಕಾರ್ಪಣೆ

ಬೆಂಗಳೂರು, ಡಿ. 30 : 'ವಾರ್ತಾಭಾರತಿ' ಕನ್ನಡ ದೈನಿಕದ 17ನೇ ವಾರ್ಷಿಕ ವಿಶೇಷಾಂಕವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆ ಮಾಡಿ, ಶುಭಾಶಯ ಕೋರಿದರು.
ಈ ಸಂದರ್ಭ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಮುಖ್ಯಮಂತ್ರಿ ಅವರ ಸಲಹೆಗಾರ ಲಕ್ಷ್ಮಿ ನಾರಾಯಣ, ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ, ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಭೃಂಗೇಶ್, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಬೆಂಗಳೂರು ಬ್ಯುರೋ ಚೀಫ್ ಬಸವರಾಜು, ಮುಖ್ಯ ವರದಿಗಾರ ಪ್ರಕಾಶ್ ರಾಮಜೋಗಿಹಳ್ಳಿ, ಓದುಗರ ಪ್ರತಿನಿಧಿಗಳಾದ ಪ್ರಿಯಾಂಕಾ, ಕಾಂತರಾಜು ಮೊದಲಾದವರು ಉಪಸ್ಥಿತರಿದ್ದರು.







