Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ
  4. ಮಾತುಕತೆ ನಿಲ್ಲದಿರಲಿ

ಮಾತುಕತೆ ನಿಲ್ಲದಿರಲಿ

ವಾರ್ತಾಭಾರತಿವಾರ್ತಾಭಾರತಿ30 Dec 2019 4:57 PM IST
share
ಮಾತುಕತೆ ನಿಲ್ಲದಿರಲಿ

ಇದು 20 ವರ್ಷ ಹಿಂದಿನ ಕಥೆ. 1999ರಲ್ಲಿ ಅಂದಿನ ನಮ್ಮ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಒಂದು ನಿಯೋಗ ಲಾಹೋರ್‌ಗೆ ಹೋಗಿತ್ತು. ಖ್ಯಾತ ಉರ್ದು ಕವಿ ಅಲಿ ಸರ್ದಾರ್ ಜಾಫ್ರಿಯವರಿಗೆ, ಲಾಹೋರ್‌ಗೆ ಬಂದು ನಿಯೋಗವನ್ನು ಸೇರಿಕೊಳ್ಳಬೇಕೆಂಬ ಆಮಂತ್ರಣ ಬಂದಿತ್ತು. ಆದರೆ ಅನಾರೋಗ್ಯದ ನಿಮಿತ್ತ ಅವರಿಗೆ ಹೋಗಲಾಗಲಿಲ್ಲ. ಅವರು ‘ಸರ್ಹದ್’ ಎಂಬ ತನ್ನ ಕವನ ಸಂಕಲನದ 10 ಕ್ಯಾಸೆಟ್‌ಗಳನ್ನೂ ವಾಜಪೇಯಿಯವರಿಗೆ ಕಳಿಸಿಕೊಟ್ಟರು. ಅದರಲ್ಲಿದ್ದ ‘ಗುಫ್ತಗೂ ಬಂದ್ ನಹೋ’ ಎಂಬ ಒಂದು ಗಮನಾರ್ಹ ಉರ್ದು ಕವನದ ಅನುವಾದ ಇಲ್ಲಿದೆ.

ಮಾತುಕತೆ ನಿಲ್ಲದಿರಲಿ

ಮಾತಿಂದ ಮಾತು ಬೆಳೆಯುತಿರಲಿ

ಮಿಲನದ ಸಂಜೆ, ಬೆಳಗಿನವರೆಗೂ ಬೆಳೆಯಲಿ,

ನಮ್ಮಮೇಲೆ ನಗುವ, ತಾರೆಗಳು ತುಂಬಿದ ಈ ಇರುಳು ಬೆಳೆಯಲಿ.

ಪದಗಳ ಕೈಯಲ್ಲಿ ನಿಂದನೆಯ ಕಲ್ಲುಗಳಿದ್ದರೆ ಇರಲಿ,

ವಿಷದ ಲೋಟೆಯಿಂದ ವ್ಯಂಗ್ಯ ಚೆಲ್ಲುವವರು ಚೆಲ್ಲುತಿರಲಿ.

ದೃಷ್ಟಿಗಳು ವಕ್ರವಾಗಿದ್ದರೆ, ಹುಬ್ಬು ಗಂಟಿಕ್ಕಿಕೊಂಡಿದ್ದರೆ, ಹಾಗೆಯೇ ಇರಲಿ,

ಪರಿಸ್ಥಿತಿ ಏನೇ ಇರಲಿ, ಎದೆಯೊಳಗಿನ ಮನ ಮಾತ್ರ ಜೀವಂತವಿರಲಿ.

ಅಕ್ಷರಕ್ಕೆ ಸರಪಣಿ ಕಟ್ಟಲು ಅಸಹಾಯಕತೆಗೆ ಸಾಧ್ಯವಾಗದು,

ಎಂತಹ ಕಟುಕನಿಗೂ ಧ್ವನಿಯನ್ನು ಅಡಗಿಸಲು ಸಾಧ್ಯವಾಗದು.

ಬೆಳಗಾಗುವ ಮುನ್ನ ಅಕ್ಷರವೊಂದು ಮೈತ್ರಿಯ ರೂಪ ತಾಳಿ ಬರಲಿದೆ

ಹೆಜ್ಜೆಗಳೆಷ್ಟು ಓಲಾಡಿದರೂ ಪ್ರೀತಿಯು ಖಂಡಿತ ನಡೆದು ಬರಲಿದೆ

ದೃಷ್ಟಿಗಳು ತಗ್ಗಲಿವೆ, ಹೃದಯಗಳು ಮಿಡಿಯಲಿವೆ, ತುಟಿಗಳು ಕಂಪಿಸಲಿವೆ

ಮೌನವು ತುಟಿಗಳ ಚುಂಬನವಾಗಿ ಕಂಪನ್ನು ಹರಡಲಿದೆ.

ಹೂವಿನ ಗೊಂಚಲುಗಳ ತಿಕ್ಕಾಟದ ಧ್ವನಿ ಮಾತ್ರ ಮೊಳಗಲಿದೆ

ಪದಗಳ, ರಾಗಗಳ ಅಗತ್ಯವೇ ಅಳಿಯಲಿದೆ

ಕಣ್ಣು, ಹುಬ್ಬುಗಳ ಸೂಚನೆಗಳ ಮೂಲಕವೇ ಪ್ರೀತಿಯು ಅರಳಲಿದೆ

ದ್ವೇಷ ಅಳಿಯಲಿದೆ, ವಿಶ್ವಾಸ ಮೆರೆಯಲಿದೆ

ಕೈಯಲ್ಲಿ ಕೈ ಹಿಡಿದು ಜಗವನ್ನೆಲ್ಲ ಜೊತೆಗೂಡಿಸಿಕೊಂಡು

ಸಹತಾಪದ ಉಡುಗೊರೆ ಹೊತ್ತು ಪ್ರೀತಿಯ ಕಾಣಿಕೆಗಳ ಜೊತೆ

ಹಗೆತನದ ಮುಳ್ಳಿನ ಹಾದಿಯನ್ನು ದಾಟಿ ಹೋಗುವೆವು ನಾವು

ನೆತ್ತರ ನದಿಗಳನ್ನು ದಾಟಿ ದಡವನ್ನು ಸೇರುವೆವು ನಾವು.

ಮಾತುಕತೆ ನಿಲ್ಲದಿರಲಿ

ಮಾತಿಂದ ಮಾತು ಬೆಳೆಯಲಿ

ಮಿಲನದ ಸಂಜೆ ಬೆಳಗಿನವರೆಗೂ ಬೆಳೆಯಲಿ

ನಮ್ಮನ್ನು ಕಂಡು ನಗುವ ಈ ತಾರೆಗಳು ತುಂಬಿದ ರಾತ್ರಿ ಬೆಳೆಯಲಿ

ಉರ್ದು ಮೂಲ: ಅಲೀ ಸರ್ದಾರ್ ಜಾಫ್ರಿ

ಕನ್ನಡಕ್ಕೆ: ಡಾ. ಕೌಸರ್ ನಿಸಾಫ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X