ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ: ತಮಿಳುನಾಡಿನ ಹಲವೆಡೆ ಸಿಎಎ ವಿರೋಧಿಸಿ ರಂಗೋಲಿ ಬಿಡಿಸಿದ ಜನರು

ಚೆನ್ನೈ: ಪೌರತ್ವ ಕಾಯ್ದೆ ವಿರೋಧಿ ರಂಗೋಲಿಗಳನ್ನು ಬಿಡಿಸಿದವರನ್ನು ಪೊಲೀಸರು ವಶಕ್ಕೆ ಪಡೆದುದನ್ನು ವಿರೋಧಿಸಿ ತಮಿಳುನಾಡಿನಾದ್ಯಂತ ಜನರು ತಮ್ಮ ಮನೆಗಳ ಹೊರಗೆ ಸಿಎಎ ವಿರೋಧಿ ರಂಗೋಲಿಗಳನ್ನು ಬಿಡಿಸಿದ್ದಾರೆ.
ಸೋಮವಾರ ಟ್ವಿಟರ್ ನಲ್ಲಿ 'ಡಿಎಂಕೆ ಕೋಲಂ ಪ್ರೊಟೆಸ್ಟ್' ಹಾಗೂ `ಕೋಲಂ ಅಗೇನ್ಸ್ಟ್‍ಸಿಎಎ' ಟ್ರೆಂಡಿಂಗ್ ಆಗಿತ್ತಲ್ಲದೆ, ನೂರಾರು ಮಂದಿ ತಮ್ಮ ಮನೆಯ ಹೊರಗಡೆ ತಾವು ಬಿಡಿಸಿದ ರಂಗೋಲಿಗಳ ಚಿತ್ರಗಳನ್ನು ಪೋಸ್ಟ್ ಮಾಡಲಾರಂಭಿಸಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಚೆನ್ನೈನಲ್ಲಿರುವ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ನಿವಾಸದೆದರೂ ಸಿಎಎ ವಿರೋಧಿ ರಂಗೋಲಿ ಬಿಡಿಸಲಾಯಿತು.
ಪರಿಸರ ಹೋರಾಟಗಾರ ನಿತ್ಯಾನಂದ ಜಯರಾಮನ್ ಅವರು ಕೂಡ ತಮ್ಮ ಚೆನ್ನೈ ನಿವಾಸದ ಹೊರಗೆ ಸಿಎಎ ವಿರೋಧಿಸಲು ಹಾಗೂ ಮರ್ಘಳಿ ಉತ್ಸವದ ಆಚರಣೆಗೆ ಕೋಲಂ ಬಿಡಿಸಿದರೆ, ಪೊಲೀಸರಿಂದ ಪ್ರತಿಭಟನೆ ವೇಳೆ ಬಂಧನಕ್ಕೊಳಗಾಗಿದ್ದ ಹೋರಾಟಗಾರ್ತಿ ಗಾಯತ್ರಿ ಕಂಢದೈ ಕೂಡ ತಮಿಳುನಾಡಿನಾದ್ಯಂತ ಪುರುಷರು ಕೋಲಂ ಬಿಡಿಸುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ರವಿವಾರ ಬೆಸೆಂಟ್ ನಗರದ ರಸ್ತೆಯಲ್ಲಿ ಸಿಎಎ ವಿರೋಧಿ ರಂಗೋಲಿ ಬಿಡಿಸಿದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದರು. "ನೋ ಸಿಎಎ" (ವೇಂಡಂ ಸಿಎಎ) ಎಂದು ಬಿಳಿ ಹಾಗೂ ಕೆಂಪು ಬಣ್ಣದ ರಂಗೋಲಿ ಬಿಡಿಸಿದ್ದಕ್ಕೆ ಗಾಯತ್ರಿ, ಮದನ್, ಆರತಿ, ಕಲ್ಯಾಣಿ ಹಾಗೂ ಪ್ರಗತಿ ಎಂಬವರನ್ನು ಬಂಧಿಸಲಾಗಿತ್ತು. ಅವರ ಬಿಡುಗಡೆಗಾಗಿ ತೆರಳಿದ ಇಬ್ಬರು ವಕೀಲರುಗಳಾದ ಟಿ ಮೋಹನ್ ಹಾಗೂ ಯೋಗೇಶ್ವರನ್ ಎಂಬವರನ್ನೂ ಪೊಲೀಸರು ಬಂಧಿಸಿದ್ದರು.
ರಸ್ತೆಗಳಲ್ಲಿ ರಂಗೋಲಿ ಬಿಡಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂಬುದು ಪೊಲೀಸರ ವಾದವಾಗಿತ್ತು. ಸುಮಾರು 90 ನಿಮಿಷಗಳ ನಂತರ ಬಂಧಿತರನ್ನು ಪೊಲೀಸರು ಬಿಡುಗಡೆಗೊಳಿಸಿದ್ದರು.
All seven has been detained as they didn't have seek prior permission for the rangoli protest. #CAA_NRC_NPR pic.twitter.com/JRePeBSgrN
— Mugilan Chandrakumar (@Mugilan__C) December 29, 2019
All seven has been detained as they didn't have seek prior permission for the rangoli protest. #CAA_NRC_NPR pic.twitter.com/JRePeBSgrN
— Mugilan Chandrakumar (@Mugilan__C) December 29, 2019
Police have detained 5 of us at the community hall outside J5 Shastri Nagar station for puting Kolam art against CAA pic.twitter.com/shhLDhmYqB
— Gayatri Khandhadai (@gayatrikl) December 29, 2019
Check out the men of Tamil Nadu breaking gender stereotypes to protect our culture and the constitution through #KolamAgainstCAA #KolamProtest pic.twitter.com/yqdqJ5n63G
— Gayatri Khandhadai (@gayatrikl) December 29, 2019
#NRC_CAA_Protests எங்கள் இல்லத்தில்.. pic.twitter.com/e7nZ13YLPZ
— M.K.Stalin (@mkstalin) December 30, 2019







