ಕೆಮ್ತೂರು ತುಳುನಾಟಕ ಸ್ಪರ್ಧೆ: ‘ಕೆಂಡೋನಿಯನ್ಸ್’ ನಾಟಕ ಪ್ರಥಮ
ಉಡುಪಿ, ಡಿ.30: ತುಳುಕೂಟ ಉಡುಪಿ ವತಿಯಿಂದ ಡಿ.23ರಿಂದ ಡಿ.29 ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ 18ನೆ ಕೆಮ್ತೂರು ದೊಡ್ಡಣ ಶೆಟ್ಟಿ ತುಳುನಾಟಕ ಸ್ಪರ್ಧೆಯಲ್ಲಿ ಮಂಗಳೂರು ಪಾದುವರಂಗ ಅಧ್ಯಯನ ಕೇಂದ್ರದ ಅರುಣ್‌ಲಾಲ್ ನಿರ್ದೇಶನದ ‘ಕೆಂಡೋನಿ ಯನ್ಸ್’ ನಾಟಕವು 20,000ರೂ. ನಗದು ಬಹುಮಾನ ಸಹಿತ ಶ್ರೇಷ್ಠ ನಾಟಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯ ಸಂತೋಷ್ ನಾಯಕ್ ಪಟ್ಲ ನಿರ್ದೇಶನದ ನೆತ್ತರ ಕಲ್ಯಾಣ ನಾಟಕವು 15,000ರೂ. ನಗದು ಸಹಿತ ದ್ವಿತೀಯ ಪ್ರಶಸ್ತಿ ಮತ್ತು ಮಂಗಳೂರು ಜರ್ನಿ ಥೇಟರ್ಸ್ ಗ್ರೂಪ್‌ನ ವಿದ್ದು ಉಚ್ಚಿಲ್ ನಿರ್ದೇಶನದ ‘ಗೋಂದೊಳು’ ನಾಟಕವು 10ಸಾವಿರ ರೂ. ನಗದು ಸಹಿತ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಶ್ರೇಷ್ಠ ನಿರ್ದೇಶನದಲ್ಲಿ ಕೆಂಡೋನಿಯನ್ಸ್ ನಾಟಕ ನಿರ್ದೇಶಕ ಅರುಣ್ ಲಾಲ್ ಪ್ರಥಮ , ನೆತ್ತೆರ ಕಲ್ಯಾಣ ನಾಟಕ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ದ್ವಿತೀಯ ಹಾಗೂ ಪತ್ತ್ ತರೆತ್ತಾಯನ ಕನತ್ತ ಕತೆ ನಾಟಕ ನಿರ್ದೇಶಕ ಮೈಮ್ ರಮೇಶ್ ತೃತೀಯ, ಶ್ರೇಷ್ಠ ರಂಗಪರಿಕರ ಪ್ರಸಾದನದಲ್ಲಿ ಕೆಂಡೋನಿ ಯನ್ಸ್ ಪ್ರಥಮ, ಪತ್ತ್ ತರೆತ್ತಾಯನ ಕಥೆ ದ್ವಿತೀಯ, ಪಗರಿದ ಸುಡುಕಳ ತೃತೀಯ, ಶ್ರೇಷ್ಠ ಬೆಳಕಿನಲ್ಲಿ ಕೆಂಡೋನಿಯನ್ಸ್ ನಾಟಕದ ಕ್ರಿಸ್ಟೋಪರ್ ಡಿಸೋಜ ಪ್ರಥಮ, ಇಲ್‌ಲ್ ಇಲ್‌ಲ್ದ ಕಥೆ ನಾಟಕದ ಬಾಸುಮ ಕೊಡಗು ದ್ವಿತೀಯ, ಗೊಂದೊಳು ನಾಟಕದ ಪ್ರವೀಣ್ ಜಿ.ಕೊಡವೂರು ತೃತೀಯ ಸ್ಥಾನ ಗಳಿಸಿದ್ದಾರೆ.
ಶ್ರೇಷ್ಠ ಸಂಗೀತದಲ್ಲಿ ಗೋಂದೊಳು ನಾಟಕದ ಮೇಘನಾ ಕುಂದಾಪುರ, ಅರ್ಜುನ್ ಆಚಾರ್ಯ ಪ್ರಥಮ, ಕೆಂಡೋನಿಯನ್ಸ್ ನಾಟಕದ ವೇಣು ಥೇಮುಂಡೆ, ಉದಯ್ ಕುಮಾರ್, ಮನೀಶ್ ದ್ವಿತೀಯ ಸ್ಥಾನ, ಪತ್ತ್ ತರೆತ್ತಾಯನ ಕತೆ ನಾಟಕದ ಸುಧೀಂದ್ರ ಮೋಹನ್, ಆಶಿತ್ ತೃತೀಯ, ಶ್ರೇಷ್ಠ ನಟರಾಗಿ ಕೆಂಡೋನಿಯನ್ಸ್ ನಾಟಕದ ದಾಮಣ್ಣ ಪಾತ್ರದ ಕ್ಲಾನ್‌ವಿನ್ ಫೆರ್ನಾಂಡಿಸ್ ಪ್ರಥಮ, ಗೋಂದೊಳು ನಾಟಕದ ಪೆರ್ಗಡೆ ಪಾತ್ರದ ಸುನಿಲ್ ಪಲ್ಲಮಜಲು ದ್ವಿತೀಯ, ಮರಣದ ಲೆಪ್ಪುನಾಟಕದ ನರಸಿಂಹ ರಾವ್ ಪಾತ್ರದ ಕೆ.ರಾಜಗೋಪಾಲ ಶೇಟ್ ತೃತೀಯ, ಶ್ರೇಷ್ಠ ನಟಿಯಾಗಿ ಇಲ್‌ಲ್ ಇಲ್‌ಲ್ದ ಕತೆ ನಾಟಕದ ವಾರಿಜ ಪಾತ್ರದ ಕಾವ್ಯ ವಾಣಿ ಕೊಡಗು ಪ್ರಥಮ, ಮರಣದ ಲೆಪ್ಪುನಾಟಕದ ತಾರ ಪಾತ್ರದ ಚಂದ್ರಾವತಿ ಪಿತ್ರೋಡಿ ದ್ವಿತೀಯ, ಗೋಂದೊಳು ನಾಟಕದ ದೇಬೆ ಪಾತ್ರದ ಸತ್ಯಾ ಜೀವನ್ ಸೋಮೇಶ್ವರ ತೃತೀಯ ಸ್ಥಾನ ಗಳಿಸಿದ್ದಾರೆ.
ತೀರ್ಪುಗಾರರ ಮೆಚ್ಚುಗೆ ಪಡೆದ ನಟ-ನಟಿಯರಲ್ಲಿ ಇಲ್‌ಲ್ ಇಲ್‌ಲ್ದ ಕತೆಯ ವಿಶುರಾವ್ ಹಾವಂಜೆ, ನೆತ್ತೆರ ಕಲ್ಯಾಣ ನಾಟಕದ ಬಿಜ್ಜಳ ಪಾತ್ರದ ಸಂತೋಷ್ ಪಟ್ಲ, ಬಸವಣ್ಣನ ಪಾತ್ರದ ನಾಗೇಶ್ ಮರ್ಣೆ, ಪಗರಿದ ಸುಡುಕಳ ನಾಟಕದ ವರಕಂಠ ಪಾತ್ರದ ನೂತನ್ ಕುಮಾರ್ ಕೊಡವೂರು, ಪತ್ತ್ ತರೆತ್ತಾಯನ ಕನತ ಕತೆ ನಾಟಕದ ರಾವಣ ಪಾತ್ರದ ಸುಕುಮಾರ್ ಮೋಹನ್, ಮಂಡೋದರಿ ಪಾತ್ರದ ವಾಣಿ ಸುಕುಮಾರ್, ಮರಣದ ಲೆಪ್ಪುನಾಟಕದ ಬೈರ ಪಾತ್ರದ ಬಾಲಕೃಷ್ಣ ಕೊಡವೂರು, ಡಾಕ್ಟರ್ ಪಾತ್ರದ ಸುಶಾಂತ್ ಪೂಜಾರಿ, ಕೆಂಡೋನಿಯನ್ಸ್ ನಾಟಕದ ದಿನೇಶಣ್ಣ ಪಾತ್ರದ ಸಂದೀಪ್ ಟೆಲ್ಲಿಸ್, ಪುಷ್ಪ ಪಾತ್ರದ ಝೀನಾ ಬ್ರಾಗ್ಸ್, ಇಲ್‌ಲ್ ಇಲ್‌ಲ್ದ ಕತೆ ನಾಟಕದ ಪಲ್ಲವಿ ಕೊಡಗು, ನೆತ್ತೆರ ಕಲ್ಯಾಣದ ರಂಬಾವತಿ ಪಾತ್ರದ ರಂಜಿತಾ ಆಚಾರ್ಯ, ಪಗರಿದ ಸುಡಕಳದ ರಂಜಿತ್ ಶೇಟ್ ಮೆಚ್ಚುಗೆ ಪಡೆದಿದ್ದಾರೆ. ಇಲ್ಲ್ ಇಲ್‌ಲ್ದ ಕತೆಯ ನಿರೂಪಕ ಹಾಗೂ ಮುನ್ನಿ ಪಾತ್ರದ ದೃಶಾ ಕೊಡಗು ಬಾಲನಟನಾಗಿ ತೀರ್ಪು ಗಾರರ ಮೆಚ್ಚುಗೆ ಪಡೆದಿದ್ದಾನೆ.
ಈ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ರಂಗಕರ್ಮಿಗಳಾದ ಜಯರಾಮ್ ನೀಲಾವರ, ಪ್ರಭಾಕರ ಜಿ.ಪಿ., ಪ್ರದೀಪ್‌ಚಂದ್ರ ಕುತ್ಪಾಡಿ ಸಹಕರಿಸಿದ್ದರು. ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವು ಜ.12ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣಮಂಟಪದಲ್ಲಿ ಜರುಗಲಿದ್ದು, ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಮತ್ತು ಕೆಮ್ತೂರು ತುಳುನಾಟಕ ಸ್ಪರ್ಧೆಯ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







