ಜ.5: ಉಡುಪಿಯಲ್ಲಿ ಅಂತರಜಿಲ್ಲಾ ಚೆಸ್
ಉಡುಪಿ, ಡಿ.30: ಕುಂದಾಪುರದ ಶ್ರೀ ಸಿದ್ದಿವಿನಾಯಕ ಚೆಸ್ ಅಕಾಡಮಿ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್, ಲಯನ್ಸ್ ಕ್ಲಬ್ ಮಣಿಪಾಲ, ಮೌಂಟ್ ರೋಸರಿ ಇಂಗ್ಲಿಷ್ ಮಾಧ್ಯಮ ಶಾಲೆ ಸಂತೆಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 5ರಂದು ‘ಶ್ರೀ ಸಿದ್ದಿವಿನಾಯಕ ಟ್ರೋಫಿ’ ಅಂತರಜಿಲ್ಲಾ ಚೆಸ್ ಪಂದ್ಯಕೂಟ ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ಪಂದ್ಯಾಟ ಉದ್ಘಾಟನೆ ನಡೆಯಲಿದ್ದು, 7, 9, 11, 13, 15, 17 ಮತ್ತು ಮುಕ್ತ ವಿಭಾಗಗಳಲ್ಲಿ ಒಟ್ಟು ಏಳು ಸುತ್ತಿನ ಪಂದ್ಯಕೂಟ ನಡೆಯಲಿದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳು ಮತ್ತು ವಿವಿಧ ವಿಭಾಗಗಳಲ್ಲಿ ಒಟ್ಟಾರೆಯಾಗಿ 10ಕ್ಕಿಂತಲೂ ಹೆಚ್ಚು ್ರೋಫಿಗಳನ್ನು ವಿತರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ನಂ. 9448547958, 8748029018 ನ್ನು ಸಂಪರ್ಕಿಸುವಂತೆ ಕ್ರೀಡಾಕೂಟದ ಸಂಯೋಜಕರಾದ ಬಾಬು ಜೆ. ಪೂಜಾರಿ ಮತ್ತು ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ರಾಜಗೋಪಾಲ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





