ಕವಿ ನಿಸಾರ್ ಅಹಮದ್‌ಗೆ ಬಿಬಿಎಂಪಿಯಿಂದ 20 ಲಕ್ಷ ರೂ. ನೆರವು

ಬೆಂಗಳೂರು, ಡಿ.31: ಅನಾರೋಗ್ಯ ಪೀಡಿತರಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿತ್ಯೋತ್ಸವ ಕವಿ ಕೆ.ಎಸ್ ನಿಸಾರ್ ಅಹಮದ್ ಅವರ ವೈದ್ಯಕೀಯ ವೆಚ್ಚ ಪರಿಹಾರವಾಗಿ ಬಿಬಿಎಂಪಿ 20 ಲಕ್ಷ ರೂ. ಹಣಕಾಸು ನೆರವನ್ನು ಪ್ರಕಟಿಸಿದೆ.
ಮಂಗಳವಾರ ನಡೆದ ಬಿಬಿಎಂಪಿ ಮಾಸಿಕ ಸಭೆಯಲ್ಲಿ ನಿರ್ಣಯ ಮಂಡಿಸಿದ ಆಡಳಿತ ಪಕ್ಷದ ನಾಯಕ ಕೆ.ಎಂ. ಮುನೀಂದ್ರ ಕುಮಾರ್ ಅವರು, ನಿಸಾರ್ ಅಹಮದ್ ಮತ್ತು ಅವರ ಪುತ್ರ ನವೀದ್ ಅವರು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು, ಅವರಿಗೆ ಮೇಯರ್ ಅವರ ವೈದ್ಯಕೀಯ ನಿಧಿಯಿಂದ 20 ಲಕ್ಷ ರೂ. ಭರಿಸಲಾಗುವುದು.
ನಿಸಾರ್ ಅಹಮದ್ ಅವರಿಗೆ ವೈದ್ಯಕೀಯ ವೆಚ್ಚವನ್ನು ವಿಶೇಷ ಪ್ರಕರಣ ಎಂದು ಭಾವಿಸಿ, ಹಣ ಬಿಡುಗಡೆಗೆ ಸದಸ್ಯರು ಒಕ್ಕೊರಲಿನಿಂದ ನಿರ್ಣಯ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
Next Story





