ಬೀದರ್-ಕಲಬುರ್ಗಿ-ಯಶವಂತಪುರ ರೈಲು ಶೀಘ್ರ ಆರಂಭ: ಸಂಸದ ಭಗವಂತ ಖೂಬಾ

ಕಲಬುರ್ಗಿ, ಡಿ.31: ಬೀದರ್-ಕಲಬುರ್ಗಿ-ಯಶವಂತಪುರ ರೈಲನ್ನು ದಕ್ಷಿಣ ಮಧ್ಯ ರೈಲ್ವೆಯು ಶೀಘ್ರ ಆರಂಭಿಸಲಿದೆ. ಕಲಬುರ್ಗಿ ಮೂಲಕ ಬೀದರ್-ಹುಬ್ಬಳ್ಳಿ ಮಧ್ಯೆ ನೂತನ ರೈಲು ಆರಂಭವಾಗಲಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.
ಸಿಕಂದರಾಬಾದ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ದಕ್ಷಿಣ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಲ್ಯ ಅವರು ಎರಡು ಹೊಸ ರೈಲುಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ ಎಂದರು.
ಔರಾದ್ ಮಾರ್ಗವಾಗಿ ಬೀದರ್-ನಾಂದೇಡ ರೈಲ್ವೆ ಮಾರ್ಗದ ಅಂತಿಮ ಹಂತದ ಸರ್ವೆ ಮುಗಿದಿದ್ದು, ಕೆಲವು ದಿನಗಳಲ್ಲಿ ಕಾಮಗಾರಿ ಪ್ರಾರಂಭಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಬೀದರ್‌ನಿಂದ ಹೊಸದಿಲ್ಲಿಗೆ ರೈಲು ಓಡಿಸುವ ಹಾಗೂ ಬೀದರ್-ಕಲಬುರ್ಗಿ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವುದಾಗಿ ತಿಳಿಸಿರುತ್ತಾರೆ ಎಂದು ಸಂಸದ ಖೂಬಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





