ವಾದಿರಾಜ ಕನಕದಾಸ ಸಂಗೀತೋತ್ಸವ ಸಮಾರೋಪ

ಉಡುಪಿ, ಡಿ.31: ಒಂದು ಸಮಾಜಕ್ಕೆ ಸಂಗೀತ, ನೃತ್ಯಗಳಂಥ ಸಾಂಸ್ಕೃತಿಕ ಕಲೆಗಳು ಅತಿ ಮುಖ್ಯ. ಚಿಗುರಿನಲ್ಲಿಯೇ ಈ ರೀತಿಯ ಪ್ರತಿಭೆಗಳನ್ನು ಗುರು ತಿಸಿ ಪ್ರೋತ್ಸಾಹಿಸಬೇಕು ಎಂದು ಹಿರಿಯ ಚಿಂತಕ ಹಾಗೂ ವಿಚಾರವಾದಿ ವೇದಿಕೆಯ ಅಧ್ಯಕ್ಷ ಬಿ.ಗೋಪಾಲ ಶೆಟ್ಟಿ ಹೇಳಿದ್ದಾರೆ.
ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು, ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯ ದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಿ.29 ರಂದು ನಡೆದ 42ನೆಯ ವಾದಿರಾಜ ಕನಕದಾಸ ಸಂಗೀತೋತ್ಸವದ ಸಮಾ ರೋಪ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಸಿ ಅವರು ಮಾತನಾಡುತ್ತಿದ್ದರು.
ಯುಕೆಜಿಯಿಂದ 4ನೆ ತರಗತಿ ವಿಭಾಗದಲ್ಲಿ ಪ್ರ- ಸುರಭಿ, ದ್ವಿ- ಎಸ್. ಎಚ್.ಐಸಿರಿ, ತೃ-ರಿಷಿಕಾ ಎಂ.ದೇವಾಡಿಗ, 4-7ನೆ ತರಗತಿ ವಿಭಾಗದಲ್ಲಿ ಪ್ರ- ಅಮೃತಾ ಜಿ., ದ್ವಿ-ಕೆ.ವೇದವ್ಯಾಸ ಭಟ್, ತೃ-ಸುಮಧ್ವ ತಂತ್ರಿ, 8ನೆ ತರಗತಿ ಯಿಂದ ಪಿಯುಸಿವರೆಗಿನ ವಿಭಾಗದಲ್ಲಿ ಪ್ರ-ಜಿ.ಎಂ. ಚೈತನ್ಯ, ದ್ವಿ-ಗೌರಿ, ತೃ- ಸುಮೇಧ ತಂತ್ರಿ, ಡಿಗ್ರಿ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಪ್ರ-ರಂಜನಿ ಸಾಮಗ, ದ್ವಿ-ಕೆ.ಎಸ್.ವಿಘ್ನೇಶ್, ತೃ-ಯಶೋದಾ ಭಟ್ ಬಹುಮಾನ ಪಡೆದು ಕೊಂಡರು.
ಕನಕದಾಸ ಅಧ್ಯಯನ ಸಂಶೋಧನ ಪೀಠದ ಸಂಯೋಜನಾಧಿಕಾರಿ ಪ್ರೊ. ವರದೇಶ್ ಹಿರೇಗಂಗೆ, ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕ ಉಮಾ ಉದಯಶಂಕರ್ ಉಪಸ್ಥಿತರಿದ್ದರು.







