ಅಪರೂಪದ ಬಿಳಿ ಗೂಬೆಯ ರಕ್ಷಣೆ

ಉಡುಪಿ, ಡಿ. 31: ನಗರದ ಮಾರತಿ ವೀಥಿಕಾ ಬಳಿ ಮಂಗಳವಾರ ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದ ಅಪರೂಪದ ಬಿಳಿ ಗೂಬೆಯನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಸುಧಾಕರ್ ದೇವಾಡಿಗ, ತಾರಾನಾಥ್ ಮೇಸ್ತ ಶಿರೂರು ಗೂಬೆ ಯನ್ನು ರಕ್ಷಿಸಿ ಅರಣ್ಯ ರಕ್ಷಕ ದೇವರಾಜ್ ಪಾಣ ಅವರಿಗೆ ನೀಡಿದರು. ಸೂಕ್ತ ಚಿಕಿತ್ಸೆ ನೀಡಿ ಗುಣಮುಖವಾದ ಬಳಿಕ ಬಿಳಿ ಗೂಬೆಯನ್ನು ಪರಿಸರಕ್ಕೆ ಬಿಡುವುದಾಗಿ ಅವರು ತಿಳಿಸಿದರು.
ಕಂದು ಬಣ್ಣದ ಗೂಬೆ ಗಾತ್ರದಲ್ಲಿ ದೊಡ್ಡದಾಗಿದ್ದರೆ ಬಿಳಿ ಗೂಬೆಯು ಗಾತ್ರದಲ್ಲಿ ಸಣ್ಢದಾಗಿರುತ್ತದೆ. ಇದನ್ನು ’ಬಾರನ್ ಔಲ್’ ಎಂದು ಕರೆಯ ಲಾಗುತ್ತದೆ. ನಗರದಲ್ಲಿ ಕಂಡು ಬಂದ ಈ ಅಪರೂಪದ ಬಿಳಿ ಗೂಬೆಯು ಎಲ್ಲರ ಆಕರ್ಷಣೆಯ ಕೇಂದ್ರ ವಾಗಿತ್ತು.
Next Story





