ಮಂಗಳೂರಿಗೆ ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಅಧ್ಯಕ್ಷ ಭೇಟಿ
ಮಂಗಳೂರು, ಡಿ. 31: ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸ್ವಾಬಿರ್ ಎಸ್. ಗಫ್ಫಾರ್ ಅವರನ್ನು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಸಮಿತಿಯ ವತಿಯಿಂದ ಸ್ವಾಗತ ಕೊರಲಾಯಿತು.
ಈ ಸಂದರ್ಭ ಮುಸ್ಲಿಂ ಯೂತ್ ಲೀಗ್ ರಾಜ್ಯಾಧ್ಯಕ್ಷ ಸಿದ್ದೀಕ್ ತಲಪಾಡಿ, ಜಿಲ್ಲಾಧ್ಯಕ್ಷ ಸೈಯದ್ ಅಫ್ಹಾಂ ಅಲಿ ತಂಙಳ್, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಬೀರ್ ಅಬ್ಬಾಸ್, ಕೋಶಾಧಿಕಾರಿ ಹೈದರ್ ಕಳಂಜ, ಅಡ್ಯಾರ್ ಕಣ್ಣೂರು, ಮುಸ್ಲಿಂ ಯೂತ್ ಲೀಗ್ ನಾಯಕರಾದ ಅಬ್ದುಲ್ ಲತೀಫ್ ಕಣ್ಣೂರು, ಜಿಲ್ಲಾ ಸಮಿತಿ ಸದಸ್ಯರಾದ ಅಥಾವುಲ್ಲಾ ಕಣ್ಣೂರು, ತಲಪಾಡಿ ಯೂತ್ ಲೀಗ್ ನಾಯಕರಾದ ಅಬೂಬಕರ್ ಹಾಗೂ ಯೂಸುಫ್ ಇಬ್ರಾಹೀಂ ಉಪಸ್ಥಿತರಿದ್ದರು.
Next Story





