2020ರಲ್ಲಿ ಮೂರನೇ ಚಂದ್ರಯಾನ: ಜಿತೇಂದ್ರ ಸಿಂಗ್

file photo
ಹೊಸದಿಲ್ಲಿ, ಡಿ.31: ದೇಶದ ಮೂರನೇ ಚಂದ್ರಯಾನಕ್ಕೆ 2020ರಲ್ಲಿ ಚಾಲನೆ ದೊರಕಲಿದೆ ಎಂದು ಬಾಹ್ಯಾಕಾಶ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಕೇವಲ ಲ್ಯಾಂಡರ್ ಮತ್ತು ರೋವರ್ ಮಾತ್ರ ಹೊಂದಿರುವ ಚಂದ್ರಯಾನ-3ರಲ್ಲಿ ಚಂದ್ರನ ಮೇಲೆ ಇಳಿಯುವ ಪ್ರಯತ್ನವನ್ನು ಮತ್ತೊಮ್ಮೆ ಮಾಡಲಾಗುವುದು ಎಂದವರು ಹೇಳಿದ್ದಾರೆ.
ಚಂದ್ರಯಾನ-2ನ್ನು ವೈಫಲ್ಯ ಎಂದು ಪರಿಗಣಿಸುವುದಿಲ್ಲ, ಯಾಕೆಂದರೆ ಈ ಯೋಜನೆಯಲ್ಲಿ ನಮಗೆ ಸಾಕಷ್ಟು ಕಲಿಯುವ ಅವಕಾಶ ಲಭಿಸಿದೆ. ಯಾವುದೇ ದೇಶವು ಪ್ರಥಮ ಪ್ರಯತ್ನದಲ್ಲೇ ಚಂದ್ರನ ಮೇಲಿಳಿದ ಉದಾಹರಣೆಯಿಲ್ಲ. ಅಮೆರಿಕ ಕೂಡಾ ಹಲವು ಬಾರಿ ಪ್ರಯತ್ನಿಸಿದ ಬಳಿಕ ಸಫಲವಾಗಿದೆ. ಆದರೆ ನಮಗೆ ಹಲವು ಬಾರಿ ಪ್ರಯತ್ನಿಸುವ ಅಗತ್ಯ ಬರುವುದಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
Next Story





