ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ನಿಧನ

ಉಪ್ಪಿನಂಗಡಿ: ಯುವ ಸಾಮಾಜಿಕ ಕಾರ್ಯಕರ್ತ, ಉಪ್ಪಿನಂಗಡಿಯ ಸಮೀಪದ ಹರಿನಗರ ನಿವಾಸಿ ಅವನೀಶ್ ಗಾಣಿಗ (26) ಹೃದಯಾಘಾತದಿಂದಾಗಿ ಮಂಗಳವಾರ ನಿಧನರಾದರು.
ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರು, ಮಂಗಳವಾರ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಎದೆನೋವಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಕೊನೆಯುಸಿರೆಳೆದರು. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯವಾಗಿದ್ದ ಇವರು ಮಂಡಲ ಶಾರೀರಿಕ್ ಪ್ರಮುಖ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮಂಗಳೂರಿನ ಗಾಣಿಗ ಯಾನೆ ಸಪಲಿಗ ಪರಿವಾರ್ ಗ್ರೂಪಿನಲ್ಲಿಯೂ ಸಕ್ರಿಯವಾಗಿದ್ದರು.
Next Story





