ಬಗ್ದಾದ್: ಅಮೆರಿಕ ರಾಯಭಾರ ಕಚೇರಿಗೆ ಮುತ್ತಿಗೆ

ಬಗ್ದಾದ್ (ಇರಾಕ್), ಡಿ. 31: ಇರಾಕ್‌ನಲ್ಲಿ ಅಮೆರಿಕ ನಡೆಸಿರುವ ವಾಯು ದಾಳಿಗಳನ್ನು ವಿರೋಧಿಸಿ ಮಂಗಳ ಸಾವಿರಾರು ಮಂದಿ ಬಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇರಾಕ್‌ನಲ್ಲಿರುವ ಅಮೆರಿಕ ರಾಯಭಾರಿ ಮತ್ತು ಇತರ ಸಿಬ್ಬಂದಿಯನ್ನು ಭದ್ರತಾ ಪಡೆಗಳು ಅಲ್ಲಿಂದ ಸ್ಥಳಾಂತರಿಸಿವೆ.
ರವಿವಾರ ಅಮೆರಿಕದ ಯುದ್ಧ ವಿಮಾನಗಳು ಇರಾನ್ ಬೆಂಬಲಿತ ಬಂಡುಕೋರರಿಗೆ ಸೇರಿದ ನೆಲೆಗಳ ಮೇಲೆ ದಾಳಿ ನಡೆಸಿವೆ.
ಇರಾಕ್ ಸೇನಾ ನೆಲೆಯೊಂದರ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಅಮೆರಿಕದ ನಾಗರಿಕನೊಬ್ಬ ಮೃತಪಟ್ಟಿರುವುದಕ್ಕೆ ಪ್ರತೀಕಾರವಾಗಿ ಕತೈಬ್ ಹಿಝ್ಬುಲ್ಲಾ ಬಂಡುಕೋರರ ಮೇಲೆ ದಾಳಿ ನಡೆಸಲಾಗಿತ್ತು.
ಪ್ರತಿಭಟನಕಾರರು ಅಮೆರಿಕ ರಾಯಭಾರ ಕಚೇರಿಯ ದ್ವಾರಕ್ಕೆ ಕಲ್ಲೆಸೆದರು. ಅವರು ಒಳ ಪ್ರವೇಶಿಸದಂತೆ ಇರಾಕ್ ವಿಶೇಷ ಪಡೆಗಳನ್ನು ನಿಯೋಜಿಸಲಾಗಿತ್ತು.
Next Story





