ಗಗನಯಾನಕ್ಕೆ ನಾಲ್ವರು ಆಯ್ಕೆ : ಇಸ್ರೋ ಮುಖ್ಯಸ್ಥ ಕೆ ಶಿವನ್
ಬೆಂಗಳೂರು, ಜ.1: ಚಂದ್ರಯಾನ -3 ಯೋಜನೆಗೆ ಅನುಮತಿ ಸಿಕ್ಕಿದೆ. ಗಗನ್ ಯಾನ್ ಮತ್ತು ಚಂದ್ರಯಾನ್ -3 ಯೋಜನೆಗಳಿಗೆ ಸಿದ್ಧತೆ ಆರಂಭಗೊಂಡಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಚಂದ್ರಯಾನ -3 ಪ್ರಗತಿಯ ಬಗ್ಗೆ ಇಸ್ರೋ ಮುಖ್ಯಸ್ಥ ಕೆ.ಶಿವನ್ ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಭಾರತದ ಮುಂಬರುವ ಗಗನಯಾನಕ್ಕೆ ನಾಲ್ವರು ಗಗನಯಾತ್ರಿಗಳನ್ನು ಗುರುತಿಸಲಾಗಿದೆ.ಅವರು ಜನವರಿ ಮೂರನೇ ವಾರ ರಷ್ಯಾದಲ್ಲಿ ತರಬೇತಿ ಪಡೆಯಲಿದ್ದಾರೆ, ಆದರೆ ಆಯ್ಕೆಯಾದವರ ಹೆಸರುಗಳನ್ನು ಕೆ. ಶಿವನ್ ಬಹಿರಂಗಪಡಿಸಲಿಲ್ಲ.
ಈ ವರ್ಷವೇ ಚಂದ್ರಯಾನ-3 ಯೋಜನೆ ಕಾರ್ಯಗತಗೊಳ್ಳಲಿದೆ . ಚಂದ್ರಯಾನ- 3 ಚಂದ್ರಯಾನ- 2ರಂತೆಯೇ ಇದೆ. ಲ್ಯಾಂಡರ್ ಹಾಗೂ ರೋವರ್ನ್ನು ಚಂದ್ರಯಾನ-3 ರಲ್ಲಿಯೂ ಬಳಕೆ ಮಾಡಲಾಗುವುದು ಎಂದರು.
ಚಂದ್ರಯಾನ್ ಚಂದ್ರನ ಮೇಲ್ಮೈಗೆ ಇಳಿಯುವ ಭಾರತದ ಮೊದಲ ಪ್ರಯತ್ನವಾಗಿದೆ. ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಇಳಿಯಲು ಇಸ್ರೋ ಯೋಜಿಸಿತ್ತು. ಆದಾಗ್ಯೂ, ಲ್ಯಾಂಡರ್ ವಿಕ್ರಮ್ ಕಠಿಣವಾಗಿತ್ತು.
“ನಾವು ಇಳಿಯಲು ಸಾಧ್ಯವಾಗದಿದ್ದರೂ ಚಂದ್ರಯಾನ್ -2 ರಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದೇವೆ. ಆರ್ಬಿಟರ್ ಮೂರು ವರ್ಷಗಳ ಕಾಲ ಡಾಟಾವನ್ನು ಸಂಗ್ರಹಿಸಬಹುದು ”ಎಂದು ಶಿವನ್ ಹೇಳಿದರು.