ಮೇ 2ರಿಂದ ಸಿಎ ಪರೀಕ್ಷೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜ.1: ಚಾರ್ಟರ್ಡ್ ಅಕೌಂಟಟ್ಸ್ (ಸಿಎ)ಪರೀಕ್ಷೆಗಳ ದಿನಾಂಕಗಳನ್ನು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಟ್ಸ್ (ಐಸಿಎಐ) ಬುಧವಾರ ಪ್ರಕಟಿಸಿದ್ದು,2020 ಮೇ2ರಿಂದ ಮೇ 18ರವರೆಗೆ ನಡೆಯಲಿವೆ.
ಸಿಎ ಫೌಂಡೇಷನ್,ಇಂಟರ್ ಮೀಡಿಯೇಟ್ (ಐಪಿಸಿ)ಗೆ ಪ್ರವೇಶ ಹಾಗೂ ಇಂಟರಮೀಡಿಯೇಟ್ ಮತ್ತು ಅಂತಿಮ ಪರೀಕ್ಷೆಗಳಿಗೆ ಅರ್ಜಿ ಪ್ರಕ್ರಿಯೆಯು ಫೆ.5ರಿಂದ ಫೆ.26ರವರೆಗೆ ನಡೆಯಲಿದೆ.
ಸಿಎ ಪರೀಕ್ಷೆಗಳು ದೇಶಾದ್ಯಂತ 207 ಕೇಂದ್ರಗಳ ಜೊತೆಗೆ ಅಬುಧಾಬಿ, ದೋಹಾ, ದುಬೈ, ಕಾಠ್ಮಂಡು ಮತ್ತು ಮಸ್ಕತ್ ನಲ್ಲಿಯ ಐದು ಕೇಂದ್ರಗಳಲ್ಲಿಯೂ ನಡೆಯಲಿವೆ.
ಮೇ ತಿಂಗಳಲ್ಲಿ ನಡೆಯುವ ಸಿಎ ಪರೀಕ್ಷೆಯ ಪರಿಣಾಮಗಳು ಆಗಸ್ಟ್ನಲ್ಲಿ ಪ್ರಕಟಗೊಳ್ಳುವ ಸಾಧ್ಯತೆಯಿದೆ. ನವಂಬರ್ನ ಸಿಎ ಪರೀಕ್ಷೆಗಾಗಿ ನೋಂದಣಿ ಪ್ರಕ್ರಿಯೆಯು ಆಗಸ್ಟ್-ಸೆಪ್ಟೆಂಬರ್ನಲ್ಲಿ ನಡೆಯಲಿದೆ.
Next Story