ಪ್ರತ್ಯೇಕ ಘಟನೆ: ಮೂವರ ಆತ್ಮಹತ್ಯೆ
ಮಣಿಪಾಲ, ಜ.2: ಅಸ್ತಮಾ ಹಾಗೂ ಕ್ಷಯರೋಗದಿಂದ ಬಳಲುತಿದ್ದು, ಮಾನಸಿಕ ಖಿನ್ನತೆಗೆ ತುತ್ತಾದ ಮಾರ್ಕೊಸ್ ಡಿಸೋಜ (67) ಎಂಬವರು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜ.1ರ ಬುಧವಾರ ಅಪರಾಹ್ನ 12:30ರಿಂದ ಸಂಜೆ 7:00 ಗಂಟೆ ನಡುವಿನ ಅವಧಿಯಲ್ಲಿ ತಾವು ವಾಸವಾಗಿದ್ದ ಪೆರಂಪಳ್ಳಿ ಶಿಂಬ್ರಾದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ರಕ್ತಹೀನತೆ ಕಾಯಿಲೆಯಿಂದ ಬಳಲುತಿದ್ದು, ಕಾಯಿಲೆ ವಾಸಿಯಾಗದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿದ ನಾರಾಯಣ ಶೇರಿಗಾರ್(55) ಎಂಬವರು ಜ.1ರ ಬುಧವಾರ ಬೆಳಗ್ಗೆ 7:30ರಿಂದ ಸಂಜೆ 7:30ರ ಮಧ್ಯಾವಧಿಯಲ್ಲಿ ತಾವಿದ್ದ 76 ಬಡಗುಬೆಟ್ಟು ಹನುಮಾನ ಗ್ಯಾರೆಜ್ ಬಳಿಯ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜೆಕಾರು: ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಯುವಕರೊಬ್ಬರು ಮಾನಸಿಕ ಖಿನ್ನತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಗ್ಗೆ 6:30ರಿಂದ 8:15ರ ನಡುವಿನ ಅವಧಿಯಲ್ಲಿ ಕಡ್ತಲ ಗ್ರಾಮದ ಕಂಬಳ ಮನೆಯ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಅಶ್ವಥ್ ಹೆಗ್ಡೆ (32) ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಕೃಷಿ ಮಾಡಿಕೊಂಡಿದ್ದು, ಮಾನಸಿಕ ಕಾಯಿಲೆಗಾಗಿ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದು ಕೊಂಡಿದ್ದರು. ಈ ನಡುವೆ ಅವರು ಮದ್ಯಪಾನ ಮಾಡುತಿದ್ದು, ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







