ಕಲಬುರಗಿ: ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಉಪವಾಸ ಆಚರಣೆ

ಕಲಬುರಗಿ: ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ, ಸಂಕಷ್ಟ ನಿವಾರಣೆಗಾಗಿ ಒಂದು ದಿನದ ರೋಜಾ (ಉಪವಾಸ) ಹಾಗೂ ವಿಶೇಷ ನಮಾಜ್ ಮಾಡುವ ಮೂಲಕ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.
ನಗರದ ಮುಸ್ಲಿಂ ಚೌಕ್ ಹತ್ತಿರದ ಮಸೀದಿಯಲ್ಲಿ ನಮಾಜ್ ನಿರ್ವಹಿಸಿ, ಬೆಳಗ್ಗೆ ಸಹರಿ ಮಾಡಿ ನಗರದ ವಿವಿಧ ಬಡವಾಣೆಯಲ್ಲಿ ಪ್ರಾರ್ಥನೆ ಮಾಡಲಾಯಿತು. ಅಲ್ಲದೇ ಉಪವಾಸ ತೊರೆಯುವ ವೇಳೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ನಗರದ ಟಿಪ್ಪು ಸುಲ್ತಾನ್ ಚೌಕ್ ನಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಸತ್ಯಾಗ್ರಹ ನಡೆಸಿ, ಇಫ್ತಾರ್ ಕೂಟ ನಡೆಸಿದರು.
ಸತ್ಯಾಗ್ರಹದಲ್ಲಿ ಸಾಮಾಜಿಕ ಕಾರ್ಯಕರ್ತ ನಝಿರ್ ಅಹ್ಮದ್, ಅಲಿಂ ಇಲಾಯಿ, ಮುಹಮದ್ ಮುಹ್ಸೀನ್ ಸೇರಿದಂತೆ ಅನೇಕರು ಹಾಜರಿದ್ದರು.
Next Story





