ಗಂಭೀರ ಮಟ್ಟ ತಲುಪಿದ ದಿಲ್ಲಿ ವಾಯು ಮಾಲಿನ್ಯ
ಹೊಸದಿಲ್ಲಿ, ಜ. 2: ದಿಲ್ಲಿಯಲ್ಲಿ ಗುರುವಾರ ಮಾಲಿನ್ಯ ಮಟ್ಟ ತೀವ್ರ ಸ್ಥಿತಿಗೆ ತಲುಪಿದೆ. ಹೊರಗಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ಸಫರ್ (ಎಸ್ಎಎಫ್ಎಆರ್) ಪ್ರಕಾರ ಗುರುವಾರ ಬೆಳಗ್ಗೆ ದಿಲ್ಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಾಂಕ 426 ದಾಖಲಾಗಿದೆ. ನೋಯ್ಡಾದಲ್ಲಿ 407 ದಾಖಲಾಗಿದೆ.
ಶುಕ್ರವಾರ ದಿಲ್ಲಿಯ ವಾಯು ಮಾಲಿನ್ಯದ ಮೂರು ಹಾಟ್ಸ್ಪಾಟ್ಗಳು ವಿನೋಬಾಪುರಿ, ಓಖ್ಲಾ ಹಾಗೂ ಬಾವನಾ ಆಗಿರಬಹುದು ಎಂದು ಸಂಸ್ಥೆ ತಿಳಿಸಿದೆ. ಬೆಳಗ್ಗಿನ ನಡಿಗೆ ಸಹಿತ ಹೊರಗಿನ ಚಟುವಟಿಕೆಯಲ್ಲಿ ತೊಡಗಬೇಡಿ ಎಂದು ಸಫರ್ ಸೂಚಿಸಿದೆ. ‘‘ನಿಮಗೆ ಯಾವುದಾದರು ಅಸಾಮಾನ್ಯ ಕೆಮ್ಮು, ಎದೆಯಲ್ಲಿ ಅಸ್ವಸ್ಥತೆ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಯಾವುದೇ ದೈಹಿಕ ಚಟುವಟಿಕೆಗಳನ್ನು ನಿಲ್ಲಿಸಿ’’ ಎಂದು ಅದು ಸಲಹೆ ನೀಡಿದೆ. ಮನೆಯ ಕಿಟಕಿಗಳನ್ನು ಮುಚ್ಚಿ ಹಾಗೂ ಅಸ್ತಮಾಕ್ಕಿರುವ ಔಷಧಗಳನ್ನು ಮನೆಯಲ್ಲಿ ಇರಿಸಿಕೊಳ್ಳಿ ಎಂದು ಸಫರ್ ತಿಳಿಸಿದೆ.
Next Story