ಕಾಸರಗೋಡು: ಕೇಂದ್ರ ಗುಪ್ತಚರ ಇಲಾಖೆಯ ಬ್ಯುರೋ ಅಧಿಕಾರಿಯ ನಿಗೂಢ ಸಾವು

ಕಾಸರಗೋಡು, ಜ.3: ಕೇಂದ್ರ ಗುಪ್ತಚರ ಇಲಾಖೆಯ ಕಾಸರಗೋಡು ಬ್ಯುರೋ ಅಧಿಕಾರಿಯೋರ್ವರು ಕಾರಿನಲ್ಲೇ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.
ಆಲಪ್ಪುಝ ನಿವಾಸಿ ರಿಜೋ ಫ್ರಾನ್ಸಿಸ್ ಮೃತಪಟ್ಟವರು.
ಬೇಕಲ ಪೇಟೆಯಲ್ಲಿ ನಿಲುಗಡೆಗೊಳಿಸಿದ್ದ ಕಾರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇದನ್ನು ಸ್ಥಳೀಯರು ಗಮನಿಸಿ ಬೇಕಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ರಿಜೋ ಫ್ರಾನ್ಸಿಸ್ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
Next Story





