ವಿಕಲಚೇತನ ವ್ಯಕ್ತಿಚಿತ್ರ ಕಲಾವಿದ ಗಣೇಶ್ ಕುಲಾಲ್‌ಗೆ ಗೌರವ

ಉಡುಪಿ, ಜ.3: ದೈಹಿಕ ನ್ಯೂನತೆಯನ್ನು ಮೆಟ್ಟಿನಿಂತು, ಪದವಿ ಶಿಕ್ಷಣ ಗಳಿಸಿ, ಚಿತ್ರಕಲೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡು ಉತ್ತಮ ವ್ಯಕ್ತಿ ಚಿತ್ರಕಲಾಕಾರ ನಾಗಿ ಮೂಡಿ ಬಂದ ವಿಕಲಚೇತನ ಶಿರ್ವ ಸಮೀಪದ ಕೋಡು ಪಂಜಿಮಾರು ನಿವಾಸಿ ಗಣೇಶ್ ಕುಲಾಲ್ ಅವರನ್ನು ಉಡುಪಿ ಕರಾವಳಿ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ವತಿಯಿಂದ ರವಿವಾರ ಉಡುಪಿ ಐಎಂಎ ಸಭಾಭವನದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಉಮೇಶ ಪ್ರಭು ವಹಿಸಿದ್ದರು. ಹಿರಿಯ ವೈದ್ಯ ಕಟಪಾಡಿ ಡಾ.ರವೀಂದ್ರನಾಥ್ ಶೆಟ್ಟಿ, ಗಣೇಶ್ ಕುಲಾಲ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಡಾ.ಪ್ರಕಾಶ್ ಭಟ್ ಉಪಸ್ಥಿತರಿದ್ದರು.
Next Story





