ಬೊಳ್ಳಾಯಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಿತ್ತಿಪತ್ರ ಪ್ರದರ್ಶನ

ಬಂಟ್ವಾಳ, ಜ. 3: ಮಂಗಳೂರು ಪೊಲೀಸ್ ದೌರ್ಜನ್ಯ ಖಂಡಿಸಿ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಬೊಳ್ಳಾಯಿ ಜಮಾಅತ್ ವತಿಯಿಂದ ಭಿತ್ತಿಪತ್ರ ಪ್ರದರ್ಶನ ಹಾಗು ಪ್ರತಿಭಟನಾ ಸಭೆ ಬೊಳ್ಳಾಯಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಶುಕ್ರವಾರ ನಡೆಯಿತು.
ಮಧ್ಯಾಹ್ನ ನಮಾರ್ನ ಬಳಿಕ ಭಿತ್ತಿಪತ್ರ ಪ್ರದರ್ಶನ ಮಾಡುವ ಮೂಲಕ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿ, ಸಂವಿಧಾನ ವಿರೋಧಿ ನೀತಿಯ ಬಗ್ಗೆ ಖಂಡಿಸಲಾಯಿತು.
ಮಸೀದಿಯ ಖತೀಬ್ ಅಬ್ಬಸ್ ಸಹದಿ ಅಲ್ ಅಫ್ಲಲಿ ಮಾತನಾಡಿ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಸಂವಿಧಾನ ವಿರೋಧಿಯಾಗಿದ್ದು, ಇದರ ವಿರುದ್ಧದ ಕಾನೂನು ಬದ್ಧ ಹೋರಾಟ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಜಮಾತಿನ ಅಧ್ಯಕ್ಷ ಬಿ.ಎಸ್. ಮುಹಮ್ಮದ್, ಜಮಾಅತಿನ ಸದಸ್ಯರು ಹಾಜರಿದ್ದರು.
Next Story





