ಸಿಎಎ, ಎನ್‍ಆರ್ ಸಿ ವಿರೋಧಿಸಿ ಕೆ.ಸಿ.ರೋಡ್ ನಲ್ಲಿ ಪ್ರತಿಭಟನೆ

ಉಳ್ಳಾಲ: ಎನ್.ಆರ್.ಸಿ.ಯಿಂದ ಜನರು ನೊಂದು ಹೋಗಿದ್ದಾರೆ. ಹಳೇ ಕಾಲದ ದಾಖಲೆ ಕೇಳಿದರೆ ಯಾರಲ್ಲೂ ಇರಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದ ಜನರಲ್ಲಿ ಯಾರಲೂ ಸರ್ಟಿಫಿಕೆಟ್ ಇಲ್ಲ. ಹಿಂದಿನ ತಲೆಮಾರಿನ ದಾಖಲೆ ಕೇಳಿದರೆ ಗೋರಿಯನ್ನು ಮಾತ್ರ ತೋರಿಸಬಹುದು. ಎನ್.ಆರ್.ಸಿ., ಸಿಎಎ ವಿರುದ್ಧ ಪ್ರತಿಭಟನೆಯ ವಿಚಾರದಲ್ಲಿ ಹತ್ತು ಕೇಸ್ ಆದರೂ ಕೂಡಾ ತೊಂದರೆ ಇಲ್ಲ, ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಸಂಯುಕ್ತ ನಾಗರಿಕ ವೇದಿಕೆ ಕೆ.ಸಿ.ರೋಡ್ ಇದರ ವತಿಯಿಂದ ಪೌರತ್ವ ತಿದ್ದುಪಡಿ ಮಸೂದೆ ಸಿಎಎ ಮತ್ತು ಎನ್.ಆರ್.ಸಿ.ವಿರುದ್ಧ ಕೆ.ಸಿ.ರೋಡ್ ಹಾಗೂ ಪರಿಸರದ ವಿವಿಧ ಮುಸ್ಲಿಂ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುವ ಹೋರಾಟವನ್ನು ಕೆಂದ್ರ ತಾತ್ಕಾಲಿಕ ಎಂದು ಚಿಂತನೆ ಮಾಡಿದರೆ ಸರಿಯಾಗದು. ಈ ಹೋರಾಟದಲ್ಲಿ ಎಲ್ಲಾ ಧರ್ಮದವರು ಕೈಜೋಡಿಸಿದ್ದಾರೆ. ಕಾಯ್ದೆ ಹಿಂಪಡೆಯುವವರೆಗೆ ನಮ್ಮ ಹೋರಾಟ ಇರುತ್ತದೆ. ಕೇಂದ್ರ ಗೃಹ ಮಂತ್ರಿಯವರು ಯಾವ ಉದ್ದೇಶವನ್ನಿಟ್ಟುಕೊಂಡು ಈ ಕಾಯ್ದೆ ರೂಪಿಸಿದ್ದಾರೆ ಎಂಬುದು ಸ್ಪಷ್ಟವಾಗಬೇಕು. ಜನರಲ್ಲಿ ಅಡಗಿರುವ ಭಯವನ್ನು ಹೋಗಲಾಡಿಸುವ ಕೆಲಸ ಆಗಬೇಕು ಎಂದರು.
ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಕೊಪ್ಪ, ಗೋಪಿನಾಥ್ ಮೆನನ್, ಖಲೀಲ್ ತಲಪಾಡಿ, ಎಕೆ ಅಶ್ರಫ್,ಯು.ಬಿ.ರಹೀಂ, ಇರ್ಶಾದ್ ಅಜ್ಜಿನಡ್ಕ,
ಮುನೀರ್ ಸಖಾಫಿ, ಉಪಸ್ಥಿತರಿದ್ದರು. ಸಿದ್ದೀಕ್ ತಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.









