ಅನಿಕೇತನ ಪ್ರಶಸ್ತಿಗೆ ಡಾ.ಸಿ.ಎಸ್.ದ್ವಾರಕಾನಾಥ್ ಆಯ್ಕೆ

ಬೆಂಗಳೂರು, ಜ.3: ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕನ್ನಡ ಸಂಘರ್ಷ ಸಮಿತಿ ನೀಡುವ 2019ನೇ ಸಾಲಿನ ’ಅನಿಕೇತನ ಪ್ರಶಸ್ತಿ’ಗೆ ಹಿರಿಯ ನ್ಯಾಯವಾದಿ ಸಿ.ಎಸ್.ದ್ವಾರಕಾನಾಥ್‌ರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿ ಐದು ಸಾವಿರ ರೂ ನಗದು, ಪ್ರಶಸ್ತಿ ಫಲಕ, ಅಭಿನಂದನಾ ಪತ್ರ ಒಳಗೊಂಡಿದೆ. ಕನ್ನಡಪರ ಚಿಂತಕ ನಂ.ನಂಜಪ್ಪ ಸಮಿತಿಯಲ್ಲಿ ಸ್ಥಾಪಿಸಿರುವ ’ನಂ.ನಂಜಪ್ಪ ಚಿರಂತನ ಪ್ರಶಸ್ತಿ’ಗೆ ಖ್ಯಾತ ಸಾಹಿತಿ ಮತ್ತು ವಿಚಾರವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ನಟರಾಜ್‌ರವರ ’ಮೌಢ್ಯ ಮತ್ತು ವೈಚಾರಿಕತೆ’ ಕೃತಿ ಆಯ್ಕೆಯಾಗಿದೆ. ಈ ಪ್ರಶಸ್ತಿಯು ಐದು ಸಾವಿರ ರೂ. ನಗದು ಒಳಗೊಂಡಿದೆ.
ಸಾಹಿತಿ ಗುಣಸಾಗರಿ ನಾಗರಾಜ್ ಸಮಿತಿಯಲ್ಲಿ ಸ್ಥಾಪಿಸಿರುವ ಕುವೆಂಪು ಯುವಕವಿ ಪ್ರಶಸ್ತಿಗೆ ಚಾಂದ್‌ಪಾಷಾ ಭಾಜನರಾಗಿದ್ದಾರೆ. ಕವನ, ನಾಟಕ ಕ್ಷೇತ್ರದಲ್ಲಿ ತಮ್ಮದೇ ಜಾಡು ಹಿಡಿದು ಮುನ್ನಡೆಯುತ್ತಿರುವ ಇವರಿಗೆ ಪ್ರಶಸ್ತಿಯ ಜೊತೆ ಒಂದು ಸಾವಿರ ರೂ ನಗದು, ನಗದು, ಪ್ರಶಸ್ತಿ ಫಲಕ ನೀಡಲಾಗುವುದು. ಜ.10ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಕೋ.ವೆಂ. ರಾಮಕೃಷ್ಣೇಗೌಡ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







