ಉಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ

ಮಂಜೇಶ್ವರ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಉಪ್ಪಳ ಪೌರತ್ವ ಸಂರಕ್ಷಣಾ ಸಮಿತಿ ವತಿಯಿಂದ ಉಪ್ಪಳ ಹಾಗೂ ವಿವಿಧ ಮೊಹಲ್ಲಾ ಸಮಿತಿ ನೇತೃತ್ವದಲ್ಲಿ ಬೃಹತ್ ಪೌರತ್ವ ಸಂರಕ್ಷಣಾ ರ್ಯಾಲಿ ನಡೆಯಿತು. ಬಂದ್ಯೋಡು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಹಾದ ರ್ಯಾಲಿ ಉಪ್ಪಳ ಪೇಟೆಯಲ್ಲಿ ಸಮಾರೋಪಗೊಂಡಿತು.
ಬಳಿಕ ನಡೆದ ಪ್ರತಿಭಟನಾ ಸಭೆಗೆ ಸಯ್ಯಿದ್ ಶಮೀಮ್ ತಂಙಳ್ ಕುಂಬೋಳ್ ಚಾಲನೆ ನೀಡಿದರು. ಟಿ. ಎ ಮೂಸಾ ಅಧ್ಯಕ್ಷತೆ ವಹಿಸಿದರು. ಮುಹಮ್ಮದ್ ಸಖಾಫಿ, ಶಾಸಕ ಎಂ. ಸಿ ಕಮರುದ್ದೀನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ. ಎಂ ಅಶ್ರಫ್, ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್, ಕೆ. ಎಸ್ ಫಕ್ರುದ್ದೀನ್, ಕೆ. ಕೆ ಅಬ್ದುಲ್ಲ ಕುಂಞಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.












