ಬಾಹ್ಯಾಕಾಶ ಸಂಶೋಧನೆ ಅಭಿವದ್ಧಿಗೆ ಎನ್.ಐ.ಟಿ.ಕೆ - ಇಸ್ರೋ ಒಪ್ಪಂದ
ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು: ಡಾ.ಪಿ ವಿ ವೆಂಕಿಟಕಷ್ಣನ್

ಸುರತ್ಕಲ್: ಇಸ್ರೋ- ಎನ್.ಐ.ಟಿ.ಕೆ ಬಾಹ್ಯಾಕಾಶ ಸಂಶೋಧನೆಯ ಅಭಿವದ್ಧಿಯಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆ ನಡೆಸಿಕೊಂಡು ಮುಂದುವರಿಯಬೇಕು. ಅಭಿವದ್ಧಿಯಲ್ಲಿ ಉತ್ತಮಗುಣಮಟ್ಟತೆಯನ್ನು ತರುವಲ್ಲಿ ಯಶಸ್ವಿಯಾಗಬೇಕು. ವಿದ್ಯಾರ್ಥಿಗಳಿಗೆ ಅತ್ಯವಶ್ಯ ಪ್ರಾಜೆಕ್ಟ್ ಆಗಿದ್ದು ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಗುಣಬೆಳೆಸಿಕೊಳ್ಳಬೇಕು ಎಂದು ಇಸ್ರೋ ಸಿಪಿಬಿಒ ನಿರ್ದೇಶಕರಾದ ಡಾ.ಪಿ.ವಿ ವೆಂಕಿಟಕಷ್ಣನ್ ಅವರು ನುಡಿದರು.
ಅವರು ಶುಕ್ರವಾರ ಸುರತ್ಕಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಜಂಟಿಯಾಗಿ ಬಾಹ್ಯಾಕಾಶದ ಕುರಿತಂತೆ ಸ್ಪೇಸ್ ಟೆಕ್ನಾಲಜಿ ಅಪ್ಲಿಕೇಶನ್ ಕಾರ್ಯಗಾರ ಹಾಗೂ ಎನ್.ಐ .ಟಿ ಕೆ ಮತ್ತು ಇಸ್ರೋ ಬಾಹ್ಯಾಕಾಶ ಸಂಶೋಧನಾ ಅಭಿವದ್ಧಿಯ ಒಪ್ಪಂದಕೆ ಸಹಿ ನೀಡಿ ಮಾತನಾಡಿದರು. ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಬಹಳ ಮುಖ್ಯವಾದದು. ವಿದ್ಯಾರ್ಥಿಗಳು ತಮ್ಮಲ್ಲಿ ಸಂಶೋಧನ ವಿಚಾರಗಳ ಕುರಿತಾದ ಕೆಲಸದಲ್ಲಿ ತೊಡಗಿಸಿಕೊಂಡು ಸಂಶೋಧನಾ ವಲಯದಲ್ಲಿ ಹೆಚ್ಚು ಪ್ರೌಡಮೆ ತರುವ ಕೆಲಸವನ್ನು ಮಾಡಬೇಕಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೋ ಇಂದು ತನ್ನದೇ ಆದ ಮೈಲುಗಲ್ಲು ಸ್ಥಾಪಿಸಲು ಶುರುಮಾಡಿದೆ. ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ನಿಟ್ಟಿನಲ್ಲಿ ಅತ್ಯನ್ನುತ ಸಂಶೋಧನೆಗಳನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇಸ್ರೋ ಕೇವಲ ಅತಿಹೆಚ್ಚು ಅಂಕಗಳಿಸಿದ, ಅತಿಹೆಚ್ಚು ಗುಣನಡತೆ ಇರುವವರನ್ನು ಗಮನಿಸಿದಯೇ ಸಂಶೋಧನೆಯಲ್ಲಿ ಆಸಕ್ತಿಕರ ನಂಬಿಕೆ ಇರುವಂತಹ ವ್ಯಕ್ತಿಗಳನ್ನು ಆರಿಸುವಲ್ಲಿ ಮುಂದಾಗಿದೆ.ಇಸ್ರೋ ಬಾಹ್ಯಾಕಾಶ ಸಂಶೋಧನೆ ಹೊಸ ರೀತಿಯ ಅಲೋಚನೆಗಳಿಂದ ಮುಂದುವರಿಯುತ್ತಿದೆ. ಈ ನಿಟ್ಟಿನಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಉತ್ತೇಜನ ನೀಡಲು ವಿದ್ಯಾರ್ಥಿಗಳಿಗೆ ಕಾರ್ಯಗಾರವನ್ನು ನೀಡುತ್ತಿದೆ ಎಂದರು.
ಸುರತ್ಕಲ್ ಎನ್.ಐ.ಟಿ.ಕೆ ನಿರ್ದೇಶಕರಾದ ಪ್ರೊ. ಕರ್ನಮ್ ಉಮಾಮಹೇಶ್ವರ ರಾವ್ ಮಾತಾನಾಡಿ, ಸುರತ್ಕಲ್ ಎನ್.ಐಟಿ.ಕೆಯು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರ ಮೈಲುಗಲ್ಲು ಇಸ್ರೋದೊಂದಿಗೆ ಅಭಿವದ್ಧಿಯಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಸ್ಥಳೀಯ ಅಧ್ಯಯನ ಕೇಂದ್ರ ಸ್ಥಾಪನೆ ಜೊತೆಗೆ ಭವಿಷ್ಯದಲ್ಲಿ ಬಾಹ್ಯಾಕಾಶದ ಉನ್ನತ ತಂತ್ರಜ್ಞಾನ, ಸಂಶೋಧನೆಗೆ ಮುಂದಾಗುವ ನಿಟ್ಟಿನಲ್ಲಿ ಇಸ್ರೋ ಮಹತ್ತರದ ಹೆಜ್ಜೆ ಇಟ್ಟಿದೆ. ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಪಾಂಡಿಚೇರಿ, ಲಕ್ಷದ್ವೀಪಗಳನ್ನೊಳಗೊಂಡಂತೆ ಬಾಹ್ಯಾಕಾಶ ಅಭಿವದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ. ಕಾರ್ಯಾಗಾರದಲ್ಲೂ ವಿದ್ಯಾರ್ಥಿ ಅತಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಕೊಳ್ಳಬೇಕು. ಇಸ್ರೋದ ಜೊತೆ ಜೊತೆಗೆ ಎನ್.ಐ.ಟಿಕೆಯು ಬಾಹ್ಯಾಕಾಶ ಅಭಿವದ್ಧಿಯಲ್ಲಿ ಸಾಥ್ ನೀಡಲಿದೆ ಎಂದರು.







