ನದಿ ಸಂರಕ್ಷಣೆಗಾಗಿ ಸಮಾಜ ಸೇವಾ ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ

ಮಂಗಳೂರು, ಜ.3: ಉಳ್ಳಾಲ ಉಳಿಯ ಮತ್ತು ಆಸುಪಾಸಿನ ನದಿ ತೀರದ ಸಂರಕ್ಷಣೆಗಾಗಿ ನಗರದ ರೋಶನಿ ನಿಲಯದ ಸಮಾಜ ಸೇವಾ ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ ಕಾರ್ಯಕ್ರಮವು ಗುರುವಾರ ಉಳ್ಳಾಲ ನಗರಸಭೆಯ ಸಭಾಂಗಣದಲ್ಲಿ ಜರುಗಿತು.
ನದಿ ಸಂರಕ್ಷಣೆ ಅಭಿಯಾನದ ಆರಂಭ, ನಡೆದು ಬಂದ ದಾರಿ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
ರೋಶನಿ ನಿಲಯದ ನಿರ್ದೇಶಕ ಕಿಶೋರ್ ಅತ್ತಾವರ ಮತ್ತು ನಗರಸಭಾ ಆರೋಗ್ಯ ಅಧಿಕಾರಿ ರಾಜೇಶ್ ಹಾಗೂ ಪರಿಸರ ಪ್ರೇಮಿ ವಾಸುದೇವ ರಾವ್ ಮಾಸ್ಟರ್, ಒಕ್ಕೂಟದ ಪ್ರತಿನಿಧಿಗಳಾದ ಸುಂದರ್ ಉಳಿಯ, ಅರುಣ್ ಡಿಸೋಜ, ಲೋಯೆಡ್ ಡಿಸೋಜ ಹಾಗೂ ಪರಿಸರ ಒಕ್ಕೂಟದ ಸಂಚಾಲಕ ಮಂಗಳೂರು ರಿಯಾಝ್ ಪಾಲ್ಗೊಂಡಿದ್ದರು.
Next Story





