ಬನ್ನೂರಿನಲ್ಲಿ ಸ್ವೀಪ್-ಮಹಿಳಾ ಜಾಗೃತಿ ಜಾಥಾ

ಪುತ್ತೂರು, ಜ.3: ಬನ್ನೂರು ಗ್ರಾಪಂ ವ್ಯಾಪ್ತಿಯ ದಾರಂದಕುಕ್ಕುವಿನಿಂದ ಬೀರಿಗ ಅಂಗನವಾಡಿ ಕೇಂದ್ರದ ತನಕ ಬನ್ನೂರಿನಲ್ಲಿ ಸ್ವೀಪ್-ಮಹಿಳಾ ಜಾಗೃತಿ ಕಾಲ್ನಡಿಗೆ ಜಾಥಾ ಇತ್ತೀಚೆಗೆ ನಡೆಯಿತು.
ಪುತ್ತೂರು ತಾಲೂಕು ಶಿಸು ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ ಬ್ಯಾಂಡ್ ಬಾರಿಸಿ ಜಾಥಕ್ಕೆ ಚಾಲನೆ ನೀಡಿದರು.
ಜಾಥಾದಲ್ಲಿ ಮತದಾನದ ಮಹತ್ವ, ಸ್ವಚ್ಛತೆ, ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ ಕುರಿತು ಘೋಷಣೆ ಮತ್ತು ಮಾಹಿತಿ ಮೂಲಕ ಜಾಗೃತಿ ಮೂಡಿಸಲಾಯಿತು. ಮಹಾತ್ಮ ಗಾಂಧಿ ನರೇಗಾ ಮಾಜಿ ಓಂಬುಡ್ಸ್‌ಮೆನ್ ಸ್ವೀಪ್ ಅಭಿಯಾನದ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಜಿನ್ನಪ್ಪ, ಸದಸ್ಯ ರತ್ನಾಕರ ಪ್ರಭು, ಸುಗ್ರಾಮ ಅಧ್ಯಕ್ಷೆ ಜಯಾ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕ ಚೇತನ್, ಅಂಗನವಾಡಿ ಕಾರ್ಯಕರ್ತೆಯರಾದ ಅರುಣಾ, ರೇವತಿ, ಗೌರಿ, ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಮಲ್ಲಿಕಾ ಆಳ್ವ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಇಂದಿರಾ, ಕಿಶೋರ್ ಸಂಘದ ಅಧ್ಯಕ್ಷೆ ಶ್ರೇಯಾ, ಜಾಗೃತಿ ವೇದಿಕೆ, ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.





