ಬರಗೂರು ಪುಸ್ತಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜ.3: ಆಸಕ್ತ ಬರಹಗಾರರಿಂದ ಬರಗೂರು ಪುಸ್ತಕ ಪ್ರಶಸ್ತಿ ಮತ್ತು ಶ್ರೀಮತಿ ರಾಜಲಕ್ಷ್ಮಿಬರಗೂರು ಪುಸ್ತಕ ಪ್ರಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಚಾರ ಸಾಹಿತ್ಯಕ್ಕೆ ಬರಗೂರು ಪುಸ್ತಕ ಪ್ರಶಸ್ತಿಯನ್ನು ಮತ್ತು ಕಾದಂಬರಿ ಪ್ರಕಾರಕ್ಕೆ ಶ್ರೀಮತಿ ರಾಜಲಕ್ಷ್ಮಿ ಬರಗೂರು ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ತಲಾ 10 ಸಾವಿರ ರೂ., ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಆಸಕ್ತರು 2018 ಮತ್ತು 2019ರಲ್ಲಿ ಪ್ರಕಟವಾದ ವಿಚಾರ ಮತ್ತು ಕಾದಂಬರಿಯ ತಲಾ 3ಪ್ರತಿಗಳನ್ನು ಜ.30ರ ಒಳಗಾಗಿ ತಲುಪುವಂತೆ ಕಳುಹಿಸಿಕೊಡಬೇಕು.
ಪುಸ್ತಕಗಳನ್ನು ವಿಳಾಸ ಡಾ.ಎ.ವಿ.ಲಕ್ಷ್ಮೀನಾರಾಯಣ, ಬೆಳಕು, 2453, 3ನೇ ಬ್ಲಾಕ್, ವಿಶ್ವೇಶ್ವರಯ್ಯ ಬಡಾವಣೆ, ಸೊಣ್ಣೇನಹಳ್ಳಿ ಬ್ರಿಡ್ಜ್ ಹತ್ತಿರ, ಬೆಂ.10ಕ್ಕೆ ಕಳುಹಿಸಿಕೊಡಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂ.9964640890ಕ್ಕೆ ಸಂಪರ್ಕಿಸಲು ತಿಳಿಸಲಾಗಿದೆ.
Next Story





