Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜಿಎಸ್‌ಟಿ ಪರಿಹಾರ ಪಾವತಿಯಲ್ಲಿನ...

ಜಿಎಸ್‌ಟಿ ಪರಿಹಾರ ಪಾವತಿಯಲ್ಲಿನ ಬಿಕ್ಕಟ್ಟು

ಕೃಪೆ: Economic and Political Weeklyಕೃಪೆ: Economic and Political Weekly3 Jan 2020 11:54 PM IST
share
ಜಿಎಸ್‌ಟಿ ಪರಿಹಾರ ಪಾವತಿಯಲ್ಲಿನ ಬಿಕ್ಕಟ್ಟು

ಒಂದು ಮಂದಗತಿಯಲ್ಲಿರುವ ಆರ್ಥಿಕತೆಯಲ್ಲಿ ಕಿರಿದಾಗುತ್ತಿರುವ ವಿತ್ತೀಯ ಅವಕಾಶವೇ ಜಿಎಸ್‌ಟಿ ಆದಾಯ ಪರಿಹಾರ ಪಾವತಿಯು ಎದುರಿಸುತ್ತಿರುವ ಹೊಸ ಆಪತ್ತಾಗಿದೆ.


ಯಾವುದೇ ತೆರಿಗೆ ಸುಧಾರಣಾ ಕ್ರಮಗಳೊಂದಿಗೆ ಬೆಸೆದುಕೊಂಡಿರುವ ಆದಾಯ ಗಳಿಕೆಯಲ್ಲಿನ ಅನಿಶ್ಚಿತತೆಗಳು ಎಲ್ಲಾ ಸರಕಾರಗಳಿಗೂ ಕಳವಳನ್ನುಂಟು ಮಾಡುತ್ತವೆ. ಹೀಗಾಗಿ ತೆರಿಗೆ ಸುಧಾರಣೆಯ ಬಗ್ಗೆ ವಿಶಾಲ ನೆಲೆಯ ಸರ್ವ ಸಮ್ಮತಿಯನ್ನು ರೂಢಿಸಬೇಕೆಂದರೆ ಯಾವುದಾದರೊಂದು ಬಗೆಯ ಆದಾಯ ರಕ್ಷಣೆಯ ಭರವಸೆಯ ಅಗತ್ಯವಿದ್ದೇ ಇರುತ್ತದೆ. ಹಾಗಾಗಿಯೇ, 2017ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) (ರಾಜ್ಯಗಳಿಗೆ ಪರಿಹಾರ) ಕಾಯ್ದೆಯಲ್ಲಿ ಜಿಎಸ್‌ಟಿ ಜಾರಿಯಾದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳ ಜಿಎಸ್‌ಟಿ(ಎಸ್‌ಜಿಎಸ್‌ಟಿ) ಮತ್ತು ಅಂತರರಾಜ್ಯ ಜಿಎಸ್‌ಟಿ ಗಳಿಕೆಯಲ್ಲಿ ಕೊರತೆ ಕಂಡು ಬಂದರೆ ಅವುಗಳ ರಾಜಸ್ವ ಆದಾಯ ರಕ್ಷಣೆಯ ಭರವಸೆಯನ್ನು ನೀಡುವ ಅವಕಾಶವನ್ನು ಕಲ್ಪಿಸಿತ್ತು. ಮೇಲಾಗಿ ಈ ಆದಾಯ ರಕ್ಷಣೆಯ ಭರವಸೆಯನ್ನೂ ಆಧಾರಿಸಿಯೇ ಜಿಎಸ್‌ಟಿ ಪರಿಷತ್ತು ಆರ್ಥಿಕತೆಯ ಮೇಲೆ ಜಿಎಸ್‌ಟಿ ಹೆಚ್ಚಿನ ಪರಿಣಾಮವನ್ನು ಬೀರದಿರಲು ಹಾಗೂ ತೆರಿಗೆ ಕಟ್ಟುವುದನ್ನು ಸರಳೀಕರಿಸಲು ಬೇಕಾದ ವಿನ್ಯಾಸ, ರಚನೆ ಮತ್ತು ಆಡಳಿತಾತ್ಮಕ ನಿಯಮಗಳನ್ನು ರೂಪಿಸುವ ಪ್ರಯೋಗಗಳನ್ನು ಮಾಡುತ್ತಲಿದೆ. ಆದರೆ ಇಂದು ದೇಶದಲ್ಲಿ ಜಿಎಸ್‌ಟಿ ಸಂಗ್ರಹವೇ ಕುಸಿಯುತ್ತಿರುವಾಗ ಅದರಲ್ಲೂ, ಮುಖ್ಯವಾಗಿ, ಜಿಎಸ್‌ಟಿ ಆದಾಯ ಪರಿಹಾರದ ಅಗತ್ಯಗಳಿಗೂ ಮತ್ತು ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆ ಸಂಗ್ರಹಗಳಿಗೂ ನಡುವಿನ ವ್ಯತ್ಯಾಸ ಬೆಳೆಯುತ್ತಾ, ಸರಿಯಾದ ಸಮಯದಲ್ಲಿ ಜಿಎಸ್‌ಟಿ ಪರಿಹಾರದ ಮೊತ್ತವನ್ನು ಬಿಡುಗಡೆಯ ವಿಷಯವು ಕೇಂದ್ರ ಹಾಗೂ ರಾಜ್ಯಗಳ ತಿಕ್ಕಾಟಗಳಿಗೆ ಕಾರಣವಾಗುತ್ತಿರುವಾಗ, ಈ ದೇಶದ ಆದಾಯ ಪರಿಹಾರ ವ್ಯವಸ್ಥೆಯನ್ನು ಸುಗಮಗೊಳಿಸುವುದರಲ್ಲಿ ಜಿಎಸ್‌ಟಿ ಪರಿಹಾರ ಕಾಯ್ದೆಯ ಪರಿಣಾಮಕತೆ ಪ್ರಶ್ನಾರ್ಹವಾಗಿದೆ.

2015-16ರಲ್ಲಿ ರಾಜ್ಯಗಳ ಎಲ್ಲಾ ತೆರಿಗೆಗಳೂ ಎಸ್‌ಜಿಎಸ್‌ಟಿಯಲ್ಲಿ ವಿಲೀನವಾಗುವ ಮುನ್ನ ಎಷ್ಟು ಮೊತ್ತದ ತೆರಿಗೆಯನ್ನು ಸಂಗ್ರಹಿಸುತ್ತಿದ್ದವೋ ಅದರ ಶೇ.14ರಷ್ಟು ಹೆಚ್ಚುವರಿ ಮೊತ್ತವನ್ನು ಪ್ರತಿವರ್ಷ ರಾಜ್ಯಗಳ ತೆರಿಗೆ ಸಂಗ್ರಹವಾಗುತ್ತಿದ್ದವೆಂಬ ಲೆಕ್ಕದಲ್ಲಿ ರಾಜ್ಯಗಳ ಎಸ್‌ಜಿಎಸ್‌ಟಿಯನ್ನು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ 2022ರ ಜೂನ್ 30ರ ತನಕ ಜಿಎಸ್‌ಟಿ ಪರಿಹಾರವನ್ನು ಪಾವತಿಸಲು 2017ರ ಜುಲೈ 1ರಿಂದ ಪಾನ್ ಮಸಾಲ ಮತ್ತಿತರ ತಂಬಾಕು ಉತ್ಪನ್ನಗಳು, ನೀರು ಸೋಡಾ, ಪ್ರಯಾಣಿಕರ ವಾಹನ ಇವೇ ಇನ್ನಿತ್ಯಾದಿ ಸರಕುಗಳ ಮೇಲೆ ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಜಿಎಸ್‌ಟಿ ಪರಿಹಾರ ನಿಧಿಗೆ ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸುವ ಪ್ರಯತ್ನವನ್ನು ಮಾಡುತ್ತಾ ಬರಲಾಗಿದೆ. ಆದರೂ ಜಿಎಸ್‌ಟಿ ಪರಿಹಾರ ಧನವನ್ನು ರಾಜ್ಯಗಳಿಗೆ ವಿತರಣೆ ಮಾಡುವುದರಲ್ಲಿ ಮಾತ್ರ ನಿರಂತರವಾಗಿ ವಿಳಂಬವಾಗುತ್ತಲೇ ಬಂದಿದೆ. ಉದಾಹರಣೆಗೆ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀಡಬೇಕಿದ್ದ 17,789 ಕೋಟಿ ರೂ.ಗಳ ಮೊತ್ತವು ಬಿಡುಗಡೆಯಾಗಿದ್ದು 2019ರ ಜುಲೈನಲ್ಲಿ. ಹಾಗೆಯೇ 2019ರ ಜೂನ್ ಮತ್ತು ಜುಲೈನಲ್ಲಿ ನೀಡಬೇಕಿದ್ದ 27,955 ಕೋಟಿ ರೂ.ಗಳು ಬಿಡುಗಡೆಯಾಗಿದ್ದು ಆಗಸ್ಟ್‌ನಲ್ಲಿ. ಹಾಗೆಯೇ 2019ರ ಆಗಸ್ಟ್ ಮತ್ತು ಸೆಪ್ಟಂಬರ್‌ನ ಬಾಕಿಯಾಗಿದ್ದ 35,298 ಕೋಟಿ ರೂ.ಗಳು ಬಿಡುಗಡೆಯಾಗಿದ್ದು ಡಿಸೆಂಬರ್ ಮಧ್ಯದಲ್ಲಿ. ಜಿಎಸ್‌ಟಿ ಪರಿಹಾರ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಹೊಸದೇನೂ ಅಲ್ಲವಾದರೂ ಜಿಎಸ್‌ಟಿ ಪರಿಹಾರ ಪಾವತಿ ಸಂಬಂಧಿಸಿದಂತೆ ಹಾಲಿ ಉದ್ಭವವಾಗಿರುವ ಬಿಕ್ಕಟ್ಟಿನ ಹಿಂದಿನ ಕಾರಣಗಳು ವಿಶೇಷವಾಗಿವೆ.

ಮೊದಲಿಗೆ ಎಸ್‌ಜಿಎಸ್‌ಟಿ ಸಂಗ್ರಹದಲ್ಲಿ ಕಂಡುಬಂದಿರುವ ಕುಸಿತ ಮತ್ತು ಭಾರತದ ಆರ್ಥಿಕತೆಯ ಒಟ್ಟಾರೆ ಇಳಿಮುಖತೆಯ ಕಾರಣದಿಂದಾಗಿ ಒಟ್ಟಾರೆ ಜಿಎಸ್‌ಟಿ ಸಂಗ್ರಹದಲ್ಲೇ ಇಳಿಕೆಯಾಗಿ ಉದ್ಭವಿಸಿರುವ ಆದಾಯ ಅನಿಶ್ಚಿತತೆಯೇ ಹಾಲಿ ವಿಳಂಬಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಜಿಡಿಪಿಯ ದರದಲ್ಲಿ ಏರಿಕೆ ಕಂಡು ತೆರಿಗೆ ಸಂಗ್ರಹದ ಸಾಧ್ಯತೆಯು ಹೆಚ್ಚಾಗದೆ ಜಿಎಸ್‌ಟಿ ಪರಿಹಾರ ಪಾವತಿಯಲ್ಲಿ ವಿಳಂಬವು ಮುಂದುವರಿಯುವುದಲ್ಲದೆ ಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆಯೂ ಹೆಚ್ಚಾಗಲಿದೆ. ಎರಡನೆಯದಾಗಿ ಮೊದಲ ಕಾರಣವನ್ನು ಮತ್ತಷ್ಟು ಬಿಗಡಾಯಿಸುವ ಸಂಗತಿಯೇನೆಂದರೆ ಒಂದೊಮ್ಮೆ ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆ ಕುಸಿದಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಜಿಎಸ್‌ಟಿ ಕಾಯ್ದೆಯು ಯಾವುದೇ ಮಾರ್ಗದರ್ಶನವನ್ನು ನೀಡುವುದಿಲ್ಲ. ಕಾಯ್ದೆಯ ವ್ಯಾಪ್ತಿಯಲ್ಲಿ ಜಿಎಸ್‌ಟಿ ವ್ಯವಸ್ಥೆಗೆ ಪರಿವರ್ತನೆಗೊಳ್ಳುತ್ತಿರುವ ಅವಧಿಯಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಪಾವತಿ ಮಾಡುವುದು ಸಂಪೂರ್ಣವಾಗಿ ಕೇಂದ್ರದ ಜವಾಬ್ದಾರಿಯಾಗಿದೆ. ಆದರೆ ಆರ್ಥಿಕತೆಯು ಇಳಿಮುಖಗೊಂಡಿರುವ ಈ ಸಂದರ್ಭದಲ್ಲಿ ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸುವುದು ಭಾರತದ ಸಾರ್ವಜನಿಕ ಹಣಕಾಸು ನಿರ್ವಹಣೆಗೆ ಸವಾಲಾಗಿ ಪರಿಣಮಿಸಲಿದೆ.

ಬಿಹಾರದಂತಹ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಬಹುಪಾಲು ರಾಜ್ಯಗಳಿಗೆ ಎಸ್‌ಜಿಎಸ್‌ಟಿಯಡಿ ವಿಲೀನವಾದ ತೆರಿಗೆ ಬಾಬತ್ತುಗಳಲ್ಲಿ ಶೇ.14ರಷ್ಟು ಅಭಿವೃದ್ಧಿಯನ್ನು ಸಾಧಿಸುವ ಸಾಮರ್ಥ್ಯವಿಲ್ಲ. ಆದ್ದರಿಂದಲೇ ಆದಾಯ ರಕ್ಷಣೆಯ ಭರವಸೆಯು ಜಿಎಸ್‌ಟಿ ವ್ಯವಸ್ಥೆಯೊಡನೆ ಹೊಂದಿಕೊಂಡು ಹೋಗುವಂತಹ ವಿತ್ತೀಯ ಅವಕಾಶವನ್ನು ದೊರಕಿಸುತ್ತದೆ. ಈ ಕಾರಣಗಳಿಗಾಗಿಯೇ, ಜಿಎಸ್‌ಟಿ ಆದಾಯ ಪರಿಹಾರ ವ್ಯವಸ್ಥೆಯನ್ನು ಇನ್ನೂ ಮೂರು ವರ್ಷಗಳ ಕಾಲ ಅಂದರೆ 2024-25ರವರೆಗೆ ವಿಸ್ತರಿಸಬೇಕೆಂದು ಹಲವಾರು ರಾಜ್ಯಗಳು 15ನೇ ಹಣಕಾಸು ಆಯೋಗದ ಮೊರೆ ಹೋಗಿದ್ದಾರೆ. ಜಿಎಸ್‌ಟಿ ಪರಿಹಾರ ಅವಧಿಯನ್ನು ವಿಸ್ತರಿಸುವ ಅಧಿಕಾರವು ನಾಮಮಾತ್ರಕ್ಕೆ ಜಿಎಸ್‌ಟಿ ಪರಿಷತ್ತಿಗಿದೆಯಾದರೂ, ಅಂತಿಮ ತೀರ್ಮಾನವನ್ನು ಮಾತ್ರ ಕೇಂದ್ರ ಸರಕಾರವೇ ತೆಗೆದುಕೊಳ್ಳಬೇಕಿರುತ್ತದೆ. ಆದರೆ ಒಟ್ಟಾರೆ ಜಿಎಸ್‌ಟಿ ಸಂಗ್ರಹವೇ ಕುಸಿದಿರುವಾಗ ಈ ಕೂಡಲೇ ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆಯನ್ನು ಸದ್ಯಕ್ಕೆ ಹಿಂದೆಗೆದುಕೊಳ್ಳುವ ಯಾವ ಸೂಚನೆಯೂ ಇಲ್ಲ. ಆದರೆ ಒಂದು ವೇಳೆ ಜಿಎಸ್‌ಟಿ ಪರಿಹಾರದ ಅವಧಿಯನ್ನು ಹೆಚ್ಚಿಸಿದರೂ, ತೆರಿಗೆ ಸಂಗ್ರಹ ಸಾಧ್ಯತೆ ಹೆಚ್ಚಾಗದೆ ಅಥವಾ ಒಟ್ಟಾರೆ ಜಿಡಿಪಿ ಅಭಿವೃದ್ಧಿಯಲ್ಲಿ ಹೆಚ್ಚಳವಾಗದೆ, ಈಗ ನಿಗದಿಯಾಗಿರುವ ಶೇ.14ರ ತೆರಿಗೆ ಹೆಚ್ಚಳದ ದರದಲ್ಲಿ ಪರಿಹಾರವನ್ನು ಕೊಡುವಷ್ಟು ವಿತ್ತೀಯ ಸಾಮರ್ಥ್ಯವನ್ನು ಕೇಂದ್ರ ಸರಕಾರವು ಹೊಂದಿದೆಯೇ? ಹಾಲಿ ಪರಿಸ್ಥಿತಿಯು ಭಾರತದ ವಿತ್ತೀಯ ಒಕ್ಕೂಟ ರಚನೆಗೆ ಎದುರಾಗುತ್ತಿರುವ ಬಿಕ್ಕಟ್ಟಿನ ಮುನ್ಸೂಚನೆಯೇ? ಆ ಬಗೆಯ ಯಾವುದೇ ತೀರ್ಮಾನಗಳಿಗೆ ಬರಲು ಇನ್ನೂ ಸಮಯ ಬೇಕು. ಆದರೆ ಜಿಎಸ್‌ಟಿ ವ್ಯವಸ್ಥೆಗೆ ಸ್ಥಿತ್ಯಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಆದಾಯ ರಕ್ಷಣೆಗೆ ನಿಗದಿಯಾಗಿರುವ ತೆರಿಗೆ ಸಂಗ್ರಹ ಹೆಚ್ಚಳದ ದರವನ್ನು ಏಕಪಕ್ಷೀಯವಾಗಿ ಕಡಿತ ಮಾಡುವುದು ವಿತ್ತೀಯ ಒಕ್ಕೂಟ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುವ ಸಂಭವವನ್ನು ನಿರಾಕರಿಸಲಾಗುವುದಿಲ್ಲ.

ತೆರಿಗೆ ನಷ್ಟಕ್ಕೆ ಸೂಕ್ತವಾದ ಪರಿಹಾರ ವ್ಯವಸ್ಥೆ ಇಲ್ಲವಾದಾಗ ಪರಿಹಾರದ ಅವಧಿಯ ನಂತರ ರಾಜ್ಯಗಳು ಜಿಎಸ್‌ಟಿ ವ್ಯವಸ್ಥೆಯೊಳಗೆ ಮುಂದುವರಿಯಲು ಬೇಕಾದ ಬಂಧವೇ ಇಲ್ಲವಾಗುತ್ತದೆ. ಅದೇ ಸಮಯದಲ್ಲಿ ಪರಿಹಾರ ವ್ಯವಸ್ಥೆಯು ನಿರಂತರವಾಗಿ ಮುಂದುವರಿಯುವುದೂ ಸಾಧ್ಯವಿಲ್ಲವೆಂಬುದನ್ನು ರಾಜ್ಯಗಳು ಅರ್ಥಮಾಡಿಕೊಂಡು ಬರಲಿರುವ ಪರಿಹಾರ ಮೊತ್ತವನ್ನು ಆಧರಿಸಿ ತಮ್ಮ ವೆಚ್ಚದ ಯೋಜನೆಯನ್ನು ರೂಪಿಸುವುದನ್ನೂ ಸಹ ಬಿಡಬೇಕಿರುತ್ತದೆ. ಹೀಗಾಗಿ ರಾಜ್ಯಗಳು ತಮ್ಮದೇ ಆದ ತೆರಿಗೆ ಹಾಗೂ ತೆರಿಗೆಯೇತರ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಬೇಕಿರುತ್ತದೆ ಅಥವಾ ತಮ್ಮ ಅನುತ್ಪಾದಕ ವೆಚ್ಚಗಳ ಮೇಲೆ ನಿಯಂತ್ರಣವನ್ನು ಸಾಧಿಸಿ ವಿತ್ತೀಯ ದೃಢೀಕರಣದ ಹಾದಿಯನ್ನು ಹಿಡಿಯಬೇಕಿರುತ್ತದೆ. ಹೀಗಾಗಿ ಪರಿಹಾರದ ಅವಧಿಯಾದ ನಂತರದಲ್ಲಿ ಎದುರಾಗಬಹುದಾದ ಯಾವುದೇ ವಿತ್ತೀಯ ಆಘಾತವನ್ನು ಎದುರಿಸಲು ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳುವುದಕ್ಕೆ ರಾಜ್ಯಗಳು ಈ ಅವಧಿಯನ್ನು ಬಳಸಿಕೊಳ್ಳಬಹುದು.

share
ಕೃಪೆ: Economic and Political Weekly
ಕೃಪೆ: Economic and Political Weekly
Next Story
X