ಸಿಐಎಸ್‌ಎಫ್-ಎಎಸ್‌ಜಿಯಿಂದ ರಕ್ತದಾನ ಶಿಬಿರ

ಮಂಗಳೂರು, ಜ.3: ಮಂಗಳೂರು ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಎಎಸ್‌ಜಿ ಮಂಗಳೂರು ಘಟಕದಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ಶುಕ್ರವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ರಕ್ತದಾನ ಶಿಬಿರವನ್ನು ಡೆಪ್ಯೂಟಿ ಕಮಾಂಡೆಂಟ್ ಅಮಿತ್‌ಕುಮಾರ್ ಉದ್ಘಾಟಿಸಿದರು. ಎಎಸ್‌ಜಿ ಘಟಕದ ಸಿಬ್ಬಂದಿ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.








